alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ಬುಕ್ ಖಾತೆ ಡಿಲೀಟ್ ಮಾಡೋದ್ಹೇಗೆ…?

ಸದ್ಯ ಹ್ಯಾಶ್ ಟ್ಯಾಗ್ ಡಿಲೀಟ್ ಫೇಸ್ಬುಕ್ ಅನ್ನೋ ಟ್ವೀಟ್, ಟ್ವಿಟ್ಟರ್ ನಲ್ಲಿ ಸದ್ದು ಮಾಡ್ತಾ ಇದೆ. ಫೇಸ್ಬುಕ್ ಬಳಕೆದಾರರ ಡೇಟಾ ಕದ್ದಿದೆ ಅನ್ನೋ ವರದಿ ಹೊರಬಿದ್ದ ಬೆನ್ನಲ್ಲೇ ಎಷ್ಟೊ ಮಂದಿ ತಮ್ಮ ಖಾತೆಯನ್ನು ಡಿಲೀಟ್ ಮಾಡಲು ಮುಂದಾಗಿದ್ದಾರೆ. ಫೇಸ್ಬುಕ್ ಅಕೌಂಟ್ ಡಿಲೀಟ್ ಮಾಡೋದು ಹೇಗೆ ಅನ್ನೋದನ್ನು ನೋಡೋಣ.

ಫೇಸ್ಬುಕ್ ಪೇಜ್ ನ ಮೇಲ್ಭಾಗದಲ್ಲಿ ಬಲಗಡೆ ಇರುವ ಆ್ಯರೋ ಮಾರ್ಕ್ ಅನ್ನು ಕ್ಲಿಕ್ ಮಾಡಿ.

ಸೆಟ್ಟಿಂಗ್ಸ್ ಅನ್ನೋ ಆಪ್ಷನ್ ಸೆಲೆಕ್ಟ್ ಮಾಡಿಕೊಳ್ಳಿ.

ಎಡಭಾಗದಲ್ಲಿರುವ ಸೆಕ್ಯೂರಿಟಿ ಎಂಬ ಆಪ್ಷನ್ ಕ್ಲಿಕ್ ಮಾಡಿ.

ಅಲ್ಲಿ ಡಿ ಆ್ಯಕ್ಟಿವೇಟ್ ಯುವರ್ ಅಕೌಂಟ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ, ನಿಮ್ಮ ಆಯ್ಕೆಯನ್ನು ಖಚಿತಪಡಿಸಿ.

ಮತ್ತೆ ನಿಮ್ಮ ಖಾತೆಯನ್ನು ಆ್ಯಕ್ಟಿವ್ ಮಾಡಬೇಕಾದಲ್ಲಿ ನಿಮ್ಮ ಇಮೇಲ್ ಐಡಿ, ಪಾಸ್ವರ್ಡ್ ಹಾಕಿ ಲಾಗಿನ್ ಆಗಬಹುದು.

ಫೇಸ್ಬುಕ್ ಅಕೌಂಡ್ ಡಿಲೀಟ್ ಮಾಡುವ ಮುನ್ನ ನಿಮ್ಮ ಇಮೇಜ್ ಹಾಗೂ ಇತರ ಮಾಹಿತಿಗಳನ್ನು ಡೌನ್ಲೋಡ್ ಮಾಡಿಟ್ಟುಕೊಳ್ಳಿ.

ಫೇಸ್ಬುಕ್ ಪೇಜ್ ನ ಮೇಲ್ಭಾಗದಲ್ಲಿನ ಬಲಗಡೆ ಇರುವ ಡೌನ್ ಆ್ಯರೋ ಕ್ಲಿಕ್ ಮಾಡಿ.

ಡೌನ್ಲೋಡ್ ಎ ಕಾಪಿ ಆಫ್ ಯುವರ್ ಫೇಸ್ಬುಕ್ ಡೇಟಾ ಎಂಬುದನ್ನು ಕ್ಲಿಕ್ ಮಾಡಿ.

ಸ್ಟಾರ್ಟ್ ಮೈ ಆರ್ಖೈವ್ ಆಪ್ಷನ್ ಕ್ಲಿಕ್ ಮಾಡಿದ್ರೆ ನಿಮ್ಮ ಫೇಸ್ಬುಕ್ ಪ್ರೊಫೈಲ್ ಮಾಹಿತಿಗಳೆಲ್ಲ ಡೌನ್ಲೋಡ್ ಆಗುತ್ತವೆ.

ಫೇಸ್ಬುಕ್ ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡಲು ಪೇಜ್ ನ ರೈಟ್ ಕಾರ್ನರ್ ನಲ್ಲಿರೋ ಕ್ವೆಶ್ಚನ್ ಮಾರ್ಕ್ ಮೇಲೆ ಕ್ಲಿಕ್ ಮಾಡಿ.

ಸರ್ಚ್ ಬಾಕ್ಸ್ ನಲ್ಲಿ ಡಿಲೀಟ್ ಎಂದು ಸರ್ಚ್ ಮಾಡಿ.

ಹೌ ಡು ಐ ಪರ್ಮನೆಂಟ್ಲಿ ಡಿಲೀಟ್ ಮೈ ಫೇಸ್ಬುಕ್ ಅಕೌಂಟ್ ಎಂಬ ಆಪ್ಷನ್ ಕ್ಲಿಕ್ ಮಾಡಿ.

ಕೆಳಭಾಗದಲ್ಲಿರುವ ಲೆಟ್ ಅಸ್ ನೋ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.

ಆಗ ಹೊಸ ವಿಂಡೋ ಓಪನ್ ಆಗುತ್ತದೆ. ಖಾತೆ ಡಿಲೀಟ್ ಮಾಡಲು ಆಪ್ಷನ್ ನಿಮಗೆ ಲಭ್ಯವಾಗುತ್ತದೆ. ಅದರಂತೆ ಎಲ್ಲಾ ಸ್ಟೆಪ್ ಅನುಸರಿಸಿ ಖಾತೆಯನ್ನು ಡಿಲೀಟ್ ಮಾಡಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...