alex Certify
ಕನ್ನಡ ದುನಿಯಾ       Mobile App
       

Kannada Duniya

ಅತಿ ತೂಕದ ಮಹಿಳೆಗೆ ದುಃಸ್ವಪ್ನವಾಯ್ತು ವಿಮಾನ

eman-ahmed_1481182904

ಈಜಿಪ್ಟ್ ರಾಜಧಾನಿ ಕೈರೋದ ನಿವಾಸಿ ಇಮಾನ್ ಅಹ್ಮದ್ ವಿಶ್ವದ ಅತ್ಯಂತ ಹೆಚ್ಚು ತೂಕದ ಮಹಿಳೆ. 500 ಕೆ.ಜಿ ತೂಕವಿರುವ ಅಹ್ಮದ್ ಚಿಕಿತ್ಸೆಗಾಗಿ ಭಾರತಕ್ಕೆ ಬರಲು ಇಷ್ಟಪಟ್ಟಿದ್ದಾಳೆ. ಆದ್ರೆ ವೀಸಾ ಸಿಗದೆ ಆಕೆ ನಿರಾಸೆಗೊಂಡಿದ್ದಾಳೆ.

ಇಮಾನ್ ಅಹ್ಮದ್ ತನ್ನ ನೋವನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮುಂದಿಟ್ಟಿದ್ದಾರೆ. ಸುಷ್ಮಾ ಸಹಾಯ ಮಾಡುವ ಭರವಸೆ ನೀಡಿದ್ದಾರೆ. ಆದ್ರೆ ಅತಿ ಹೆಚ್ಚು ತೂಕವಿರುವ 36 ವರ್ಷದ ಇಮಾನ್ ಅಹ್ಮದ್ ಳನ್ನು ಮುಂಬೈಗೆ ಕರೆತರಲು ಯಾವುದೆ ವಿಮಾನ ಸಿದ್ಧವಿಲ್ಲ.

ಕಳೆದ ಎರಡು ದಶಕಗಳಿಂದ ಅಹ್ಮದ್ ಹಾಸಿಗೆಯಲ್ಲಿದ್ದಾಳೆ. ಕೈರೋದಿಂದ ನೇರವಾಗಿ ಮುಂಬೈಗೆ ಯಾವುದೆ ವಿಮಾನವಿಲ್ಲ. ಖಾಸಗಿ ಕಂಪನಿಗಳು ಇಮಾನ್ ಳನ್ನು ಮುಂಬೈಗೆ ಕರೆತರಲು ಒಪ್ಪುತ್ತಿಲ್ಲ. ಜೆಟ್ ಏರ್ವೇಸ್ ವೆಬ್ ಸೈಟ್ ಪ್ರಕಾರ 136 ಕೆಜಿಗಿಂತ ಕಡಿಮೆ ಇರುವ ವ್ಯಕ್ತಿಗಳನ್ನು ಮಾತ್ರ ವಿಮಾನ ಹೊತ್ತೊಯ್ಯಲು ಸಾಧ್ಯ. ಹಾಗಾಗಿ ಕಂಪನಿಗಳು ಹಿಂದೇಟು ಹಾಕ್ತಾ ಇವೆ.

ಮುಂಬೈನ ಸೈಫಿ ಆಸ್ಪತ್ರೆಯಲ್ಲಿ ಇಮಾನ್ ಅಹ್ಮದ್ ಶಸ್ತ್ರಚಿಕಿತ್ಸೆ ನಡೆಯಬೇಕಿತ್ತು. ಆದ್ರೆ ವಿಮಾನ ಸಿಗ್ತಾ ಇಲ್ಲ. ಯಾವುದೇ ಏರ್ಲೈನ್ಸ್ ನಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ ಎಂದಿದ್ದಾರೆ ಆಸ್ಪತ್ರೆ ವೈದ್ಯರು. ಖಾಸಗಿ ವಿಮಾನದಲ್ಲಿ ಪ್ರಯಾಣ ಮಾಡುವಷ್ಟು ಹಣ ಇಮಾನ್ ಕುಟುಂಬದ ಬಳಿ ಇಲ್ಲ. ಹಾಗಾಗಿ ಫಂಡ್ ಹೊಂದಿಸಲಾಗ್ತಾ ಇದೆ ಎಂದು ವೈದ್ಯರು ತಿಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...