alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಗೆ ಹೇಗೆ ಥಳಿಸಬೇಕೆಂಬುದನ್ನು ಹೇಳಿದ್ದಾನೆ ಈ ಮಹಾಶಯ

saudi-man-beating_345ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ ಎಂಬ ಕೂಗು ಕೇಳಿ ಬರುತ್ತಿರುವ ಮಧ್ಯೆ ವ್ಯಕ್ತಿಯೊಬ್ಬ ಪತ್ನಿಯನ್ನು ಹೇಗೆ ಮತ್ತು ಯಾಕಾಗಿ ಥಳಿಸಬೇಕೆಂಬುದನ್ನು ಹೇಳಿದ್ದು, ಇನ್ನೂ ಆಘಾತಕಾರಿ ವಿಚಾರವೆಂದರೇ ಇದು ದೇಶವೊಂದರ ರಾಷ್ಟ್ರೀಯ ವಾಹಿನಿಯಲ್ಲಿ ಪ್ರಸಾರವಾಗಿರುವುದು.

ಸೌದಿ ಅರೇಬಿಯಾದ ಖಲೀದ್ ಅಲ್ ಸಕ್ವಬಿ ಎಂಬಾತ ಮಾತನಾಡಿರುವ ಈ ವಿಡಿಯೋದಲ್ಲಿ ಪುರುಷರು ತಮ್ಮ ಪತ್ನಿಯರನ್ನು ಥಳಿಸುವುದು ಅವರು ಪಡೆದುಕೊಂಡಿರುವ ಹಕ್ಕು ಎಂಬಂತೆ ಬಿಂಬಿಸಲಾಗಿದೆ. ಜೊತೆಗೆ ಪತ್ನಿ, ಪತಿಗೆ ಸರಿಸಮಾನವಾಗಿರಲು ಬಯಸುತ್ತಿದ್ದು, ಅವರುಗಳನ್ನು ಥಳಿಸಲು ಇದು ಒಂದು ಕಾರಣವೆಂದು ಹೇಳಲಾಗಿದೆ.

ಅಷ್ಟೇ ಅಲ್ಲ ಪತ್ನಿಗೆ ಯಾವುದರಿಂದ ಥಳಿಸಬೇಕು ಮತ್ತು ಯಾಕಾಗಿ, ಯಾವ ಯಾವ ಕಾರಣಗಳಿಗಾಗಿ ಥಳಿಸಬೇಕೆಂಬುದನ್ನು ಈ ವಿಡಿಯೋದಲ್ಲಿ ವಿವರಿಸಲಾಗಿದೆ. ಈ ವರ್ಷದ ಫೆಬ್ರವರಿಯಲ್ಲಿ ಈತನ ಕಾರ್ಯಕ್ರಮ ಸೌದಿ ಅರೇಬಿಯಾದ ರಾಷ್ಟ್ರೀಯ ವಾಹಿನಿಯಲ್ಲಿ ಪ್ರಸಾರವಾಗಿದೆ ಎನ್ನಲಾಗಿದ್ದು, ಅದು ಈಗ ಬೆಳಕಿಗೆ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...