alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವ ದಾಖಲೆಯ ಸಮೋಸಾ ತಯಾರಾಗಿದ್ದೇಗೆ..?

ಕಳೆದ ತಿಂಗಳು ಲಂಡನ್ ನಲ್ಲಿ ಸ್ವಯಂ ಸೇವಾ ಸಂಸ್ಥೆಯೊಂದು ವಿಶ್ವ ದಾಖಲೆಯ ಬರೋಬ್ಬರಿ 153.1 ಕೆ.ಜಿ. ತೂಕದ ಸಮೋಸಾ ತಯಾರಿಸಿತ್ತು. ಇದಕ್ಕಾಗಿ ಹಲವು ಮಂದಿ ಸುಮಾರು 15 ಗಂಟೆಗಳ ಕಾಲ ಶ್ರಮಿಸಿದ್ದರು. ತಯಾರಿ ಬಳಿಕ ಸಮೋಸಾವನ್ನು ಕತ್ತರಿಸಿ ನಿರ್ಗತಿಕರಿಗೆ ವಿತರಿಸಲಾಗಿತ್ತು.

ಈ ಸಮೋಸಾ ತಯಾರಿಗಾಗಿ 44 ಕೆ.ಜಿ. ಹಿಟ್ಟು, 100 ಕೆ.ಜಿ. ಆಲೂಗಡ್ಡೆ, 25 ಕೆ.ಜಿ. ಈರುಳ್ಳಿ, 15 ಕೆ.ಜಿ. ಅವರೆ ಬಳಸಿಕೊಳ್ಳಲಾಗಿದ್ದು, ಸಮೋಸಾ ತಯಾರಿಯ ಸಂಪೂರ್ಣ ಪ್ರಕ್ರಿಯೆ ವೇಳೆ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಅಧಿಕಾರಿಗಳು ಹಾಜರಿದ್ದು, ವೀಕ್ಷಿಸಿದ್ದರು.

2012 ರಲ್ಲಿ ತಯಾರಿಸಲಾಗಿದ್ದ 110.8 ಕೆ.ಜಿ. ತೂಕದ ಸಮೋಸಾ ದಾಖಲೆಯನ್ನು 153.1 ಕೆ.ಜಿ. ತೂಕದ ಈ ಸಮೋಸಾ ಮುರಿದಿದ್ದು, ಇದೀಗ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸಮೋಸಾ ತಯಾರಿಯ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ್ದು, ಸಹಸ್ರಾರು ಮಂದಿ ವೀಕ್ಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...