alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ಯಾಕ್ಸಿ ಚಾಲಕರಿಗೆ ಸರ್ಪ್ರೈಸ್ ಗಿಫ್ಟ್ ಕೊಟ್ಟಿದ್ದಾನೆ ದುಬೈ ಯುವಕ

dubaiದುಬೈನ ಅಬ್ದುಲ್ಲಜೀಜ್ ಬಜ್ ಸಾಮಾಜಿಕ ತಾಣಗಳಲ್ಲಿ ಸಖತ್ ಫೇಮಸ್ ಆಗಿದ್ದಾರೆ. ಜನರನ್ನು ರಂಜಿಸುವ ಅವರ ಪುಟ್ಟ ಪುಟ್ಟ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಎಲ್ರೂ ಇಷ್ಟಪಟ್ಟಿದ್ದಾರೆ. ಈ ಯುವಕನಿಗೆ ಇನ್ ಸ್ಟಾಗ್ರಾಮ್ ನಲ್ಲಿ 4 ಮಿಲಿಯನ್ ಫಾಲೋವರ್ಗಳಿದ್ದಾರೆ.

ರಂಜಾನ್ ಹಿನ್ನೆಲೆಯಲ್ಲಿ ಅಬ್ದುಲ್ಲಜೀಜ್ ಇಥಿಯಾದ್ ಏರ್ವೇಸ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ರು. ದುಬೈನಲ್ಲಿರೋ ಮೂವರು ಟ್ಯಾಕ್ಸಿ ಚಾಲಕರಿಗೆ ಈ ಮೂಲಕ ಸರ್ ಪ್ರೈಸ್ ಕೊಟ್ಟಿದ್ದಾರೆ. ಮನೆಯವರ ಜೊತೆಗೆ ಈದ್ ಆಚರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.

abdul

ಅಬ್ದುಲ್ಲಜೀಜ್ ಈ ಮೂವರಿಗೂ ತಮ್ಮ ತವರಿಗೆ ಹೋಗಿ ಬರಲು ವಿಮಾನದ ಟಿಕೆಟ್ ನೀಡುವ ಮೂಲಕ ಮತ್ತೊಮ್ಮೆ ಎಲ್ಲರೂ ಮೆಚ್ಚುವಂತಹ ಕಾರ್ಯ ಮಾಡಿದ್ದಾರೆ. ಫ್ರೀಯಾಗಿ ವಿಮಾನದ ಟಿಕೆಟ್ ಪಡೆದ ಮೂವರು ಟ್ಯಾಕ್ಸಿ ಚಾಲಕರು ಬೇರೆ ಬೇರೆ ದೇಶದವರು. ಓರ್ವ ಭಾರತೀಯ, ಒಬ್ಬ ಪಾಕಿಸ್ತಾನಿ ಹಾಗೂ ಮತ್ತೊಬ್ಬ ಬಾಂಗ್ಲಾದೇಶ ಮೂಲದ ಟ್ಯಾಕ್ಸಿ ಚಾಲಕ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...