alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ನಲ್ಲಿ ಇಮ್ರಾನ್ ಪಕ್ಷ ಗೆದ್ದಿದ್ದು ಹೇಗೆ ಗೊತ್ತಾ?

ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಪಕ್ಷದ ಗೆಲುವಿಗೆ ಪಾಕಿಸ್ತಾನದ ಮಿಲಿಟರಿ ಕಾರಣವೆಂದು ಪ್ರತಿಪಕ್ಷಗಳು ಆಪಾದನೆ ಮಾಡುತ್ತಿವೆ. ಆದರೆ ಈ ಗೆಲುವಿಗೆ ಮತ್ತೊಂದು ಕಾರಣವಿದೆ ಎಂದು ತಿಳಿದುಬಂದಿದೆ.

ಇಮ್ರಾನ್ ಖಾನ್ ಪಕ್ಷವು ಈ ಬಾರಿಯ ಚುನಾವಣೆಯಲ್ಲಿ ಹೊಸ ತಂತ್ರವನ್ನು ಬಳಸಿದ್ದು, ಮೊಬೈಲ್ ಆಪ್ ಮೂಲಕ ಮತದಾರರನ್ನು ಸಂಪರ್ಕಿಸಿದ್ದಲ್ಲದೇ, ಮತದಾರರ ಕುರಿತು ಪೂರ್ಣ ಮಾಹಿತಿಯನ್ನು ಸಂಗ್ರಹಿಸಿ ಇದರಲ್ಲಿ ತಮ್ಮ ಬೆಂಬಲಿಗರು ಯಾರು ಎಂಬ ಮಾಹಿತಿಯನ್ನು ಕಲೆ ಹಾಕಿದೆ. ಈ ಮಾಹಿತಿಯ ಪ್ರಕಾರ ತಮ್ಮ ಬೆಂಬಲಿಗ ಮತದಾರರನ್ನು ನೇರವಾಗಿ ತಲುಪಿ ಅವರನ್ನು ಮತಗಟ್ಟೆಗೆ ಬರುವಂತೆ ಪ್ರೇರೇಪಿಸಿದೆ. ಇದೇ ಈ ಚುನಾವಣೆಯಲ್ಲಿ ನವಾಜ್ ಶರೀಫ್ ಅವರ ಪಕ್ಷದ ಸೋಲಿಗೆ ಮುಖ್ಯ ಕಾರಣ ಎಂದು ತಿಳಿದು ಬಂದಿದೆ.

ಇಮ್ರಾನ್ ಖಾನ್ ಪಕ್ಷದ ನಾಯಕರು ಚುನಾವಣೆಗೂ ಮುನ್ನ ತಮ್ಮ ಕಾರ್ಯತಂತ್ರ ಎಲ್ಲಿಯೂ ಬಹಿರಂಗವಾಗದಂತೆ ತೀವ್ರ ನಿಗಾ ವಹಿಸಿದ್ದರು. ಚುನಾವಣೆ ಗೆಲುವಿನ ಬಳಿಕ ಈಗ ಒಂದೊಂದೇ ಮಾಹಿತಿಗಳು ಹೊರಬರತೊಡಗಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...