alex Certify
ಕನ್ನಡ ದುನಿಯಾ       Mobile App
       

Kannada Duniya

ನಂಬಿದ್ರೆ ನಂಬಿ ಬಿಟ್ರೆ ಬಿಡಿ! ವ್ಯಕ್ತಿಯ ಜೀವ ಉಳಿಸಿದೆ ವಾಚ್

ಸ್ಮಾರ್ಟ್ ಫೋನ್ ಗಳು ಸ್ಪೋಟಿಸಿ ಜೀವ ಹೋಗಿರುವ ಘಟನೆಗಳು ನಮ್ಮ ಮಂದಿವೆ. ಆದ್ರೆ ಕೆಲವೊಮ್ಮೆ ಈ ವಸ್ತುಗಳೇ ನಮ್ಮ ಜೀವವನ್ನು ಉಳಿಸುತ್ತವೆ ಎಂಬುದಕ್ಕೆ ಈ ಘಟನೆ ಸಾಕ್ಷಿ.

ಕಳೆದ ಭಾನುವಾರ ಹಾಂಕಾಂಗ್ ನ ಚರ್ಚ್ ಒಂದರಲ್ಲಿ ಗ್ಯಾಸ್ಟನ್ ಡಿ ಅಕ್ಟಿನೊ ಎಂಬ ವ್ಯಕ್ತಿ ಕಟ್ಟಿದ ಆ್ಯಪಲ್ ವಾಚ್ ಇದ್ದಕ್ಕಿದ್ದಂತೆ ವಿಚಿತ್ರವಾಗಿ ಝೇಂಕರಿಸಲು ಪ್ರಾರಂಭಿಸಿತು. ಕಾರಣ 76 ವರ್ಷದ ಅಕ್ಟಿನೊ ಅವರ ಹೃದಯ ಬಡಿತ ತೀವ್ರ ಹೆಚ್ಚಾಗಿತ್ತು. ಈ ಬಗ್ಗೆ ಎಚ್ಚರಿಕೆ ನೀಡಲು ವಾಚ್ ಹೀಗೆ ಝೇಂಕರಿಸಲು ಪ್ರಾರಂಭಿಸಿತು. ಇದರಿಂದ ಕಳವಳಗೊಂಡ ಅಕ್ಟಿನೊ, ಚರ್ಚ್ ನಲ್ಲಿ ಆಯೋಜಿಸಲಾಗಿದ್ದ ಭೋಜನ ಕೂಟವನ್ನು ಬಿಟ್ಟು, ಕುಟುಂಬದವರೊಂದಿಗೆ ನೇರವಾಗಿ ಆಸ್ಪತ್ರೆಗೆ ಹೋಗಿದ್ದಾರೆ.

ಆಸ್ಪತ್ರೆಗೆ ಹೋದ ಬಳಿಕ ಅವರಿಗೆ ಇಸಿಜಿ ಮಾಡಲಾಯಿತು. ನಂತರ ಕಾರ್ಡಿಯಾಲಜಿಸ್ಟ್ ಬಳಿ ತೋರಿಸುವಂತೆ ತಿಳಿಸಲಾಯ್ತು. ಹೃದಯ ಸಂಬಂಧಿ ವೈದ್ಯರು ಅವರನ್ನು ಮತ್ತಷ್ಟು ಪರೀಕ್ಷೆಗೊಳಪಡಿಸಿದರು. ಇದ್ರಿಂದ ಅಕ್ಟಿನೊ ಅವರ ಹೃದಯದ ಮೂರು ಭಾಗಗಳು ಸಂಪೂರ್ಣ ಬ್ಲಾಕ್ ಆಗಿದ್ದು ತಿಳಿದು ಬಂದಿದೆ. ಅಲ್ಲದೆ ಅವರು ಹೃದಯಾಘಾತಕ್ಕೊಳಗಾಗುವ ಸಾಧ್ಯತೆ ಹೆಚ್ಚಾಗಿತ್ತು. ತಕ್ಷಣವೇ ಅವರನ್ನ ಬಲೂನ್ ಆಂಜಿಯೋಪ್ಲಾಸ್ಟ್ ಸರ್ಜರಿಗೆ ಒಳಪಡಿಸಲಾಯಿತು. ಈ ಶಸ್ತ್ರ ಚಿಕಿತ್ಸೆ ನಂತರ ಅವರು ಅಪಾಯದಿಂದ ಪಾರಾದ್ರು.

ಆಸ್ಪತ್ರೆಯಿಂದ ಹೊರಬಂದ ನಂತರ ಅಕ್ಟಿನೊ, ಆ್ಯಪಲ್ ಸಿಇಒ ಟಿಮ್ ಕುಕ್ ಗೆ ಪತ್ರ ಬರೆದಿದ್ದಾರೆ. ಅದರಲ್ಲಿ ಆ್ಯಪಲ್ ವಾಚ್ ನಿಂದ ತಾನು ಹೇಗೆ ಜೀವ ಉಳಿಸಿಕೊಂಡೆ ಎಂಬುದನ್ನು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಟಿಮ್ ಕುಕ್ ಕೂಡಾ ನೀವು ಆರೋಗ್ಯವಾಗಿರುವುದಕ್ಕೆ ಸಂತೋಷವಾಗ್ತಿದೆ. ಅಲ್ಲದೆ ನಿಮ್ಮ ಕಥೆಯನ್ನು ನಮ್ಮ ಜೊತೆ ಹಂಚಿಕೊಂಡಿದ್ದು ಮತ್ತಷ್ಟು ಖುಷಿ ಕೊಟ್ಟಿದೆ ಅಂತಾ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...