alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಹ ಇಳಿದ ಮನೆಯೊಳಗಿತ್ತು ದೈತ್ಯ ಅತಿಥಿ

ಹ್ಯೂಸ್ಟನ್: ಹಾರ್ವೆ ಚಂಡಮಾರುತದಿಂದ ತತ್ತರಿಸಿದ್ದ ಹ್ಯೂಸ್ಟನ್ ನಗರದಲ್ಲಿ ಪ್ರವಾಹ ಇಳಿಮುಖವಾಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.

ಭಾರೀ ಮಳೆ ಪ್ರವಾಹದಿಂದ ಊರಿಗೇ ಊರೇ ಮುಳುಗಿದ್ದರಿಂದ ಜನ ಸುರಕ್ಷಿತ ಸ್ಥಳಕ್ಕೆ ತೆರಳಿದ್ದರು. ನೀರಿನಿಂದ ಆವೃತವಾದ ರಸ್ತೆಗಳಲ್ಲಿ ಶಾರ್ಕ್ ಈಜಾಡುವ, ಮನೆ ಬಾಗಿಲಲ್ಲಿ ಮೊಸಳೆ, ಹಾವು ಓಡಾಡುವ ದೃಶ್ಯಗಳು ಕಂಡು ಬಂದಿದ್ದವು.

ಈಗ ಪ್ರವಾಹ ಇಳಿಮುಖವಾಗಿ ಜನರೆಲ್ಲಾ ವಾಪಸ್ ಆಗುತ್ತಿದ್ದು, ಮನೆಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಬ್ರಿಯಾನ್ ಪೋಸ್ಟರ್ ಅವರ ಮನೆಯಲ್ಲಿ ಕ್ಲೀನ್ ಮಾಡುವಾಗ ಡೈನಿಂಗ್ ಟೇಬಲ್ ಕೆಳಗೆ ಬರೋಬ್ಬರಿ 9 ಅಡಿ ಉದ್ದದ ಮೊಸಳೆಯೊಂದು ಕಾಣಿಸಿಕೊಂಡಿದೆ.

ಭಯಭೀತರಾದ ಅವರು ವನ್ಯಜೀವಿ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಆಗಮಿಸಿದ ಪೊಲೀಸರು, ವನ್ಯಜೀವಿ ಇಲಾಖೆ ಸಿಬ್ಬಂದಿ ಸತತ 20 ನಿಮಿಷ ಕಾರ್ಯಾಚರಣೆ ನಡೆಸಿ ಮೊಸಳೆಯನ್ನು ಸೆರೆ ಹಿಡಿದು ಅಲ್ಲಿಂದ ಸಾಗಿಸಿದ್ದಾರೆ.

ಹ್ಯಾರಿಸ್ ಕೌಂಟಿ ಪೊಲೀಸ್ ಇಲಾಖೆ ಮೊಸಳೆಯ ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...