alex Certify
ಕನ್ನಡ ದುನಿಯಾ       Mobile App
       

Kannada Duniya

ಇದು ಶವಗಳ ಹೊಟೇಲ್…!

ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಜಪಾನ್ ಕೂಡ ಒಂದು. ಪ್ರತಿ ವರ್ಷ ಇಲ್ಲಿ ಸುಮಾರು 16 ಲಕ್ಷ ಮಂದಿ ಸಾವನ್ನಪ್ಪುತ್ತಾರೆ. ಇಷ್ಟೊಂದು ಪ್ರಮಾಣದಲ್ಲಿ ಜನರು ಸಾವನ್ನಪ್ಪುವುದ್ರಿಂದ ಇದನ್ನೇ ಜಪಾನಿನ ಜನ ಬ್ಯುಸಿನೆಸ್ ಮಾಡಿಕೊಂಡಿದ್ದಾರೆ.

ಸಾವಿನ ಹೊಸ ಬ್ಯುಸಿನೆಸ್ ಶುರುಮಾಡಿಕೊಂಡ ವ್ಯಕ್ತಿ ಹಿಸಾಯೋಶಿ ಟೆರಾಮುರಾ. ಈತ ಯೋಕೋಹಾಮಾ ನಿವಾಸಿ. ಮೊದಲು ಸಮಾಧಿ ಹಾಗೂ ಶವ ಪಟ್ಟಿಗೆಗೆ ಸಂಬಂಧಿಸಿದ ಬ್ಯುಸಿನೆಸ್ ಮಾಡ್ತಿದ್ದನಂತೆ ಹಿಸಾಯೋಶಿ. ಆದ್ರೀಗ ಶವದ ಹೊಟೇಲ್ ಶುರುಮಾಡಿದ್ದಾನೆ.

ಸಾವಿನ ಸಂಖ್ಯೆ ಹೆಚ್ಚಾಗಿರುವುದ್ರಿಂದ ಸ್ಮಶಾನ ತುಂಬಿರುತ್ತದೆ. ಸತ್ತ ದಿನವೇ ಅಂತ್ಯ ಸಂಸ್ಕಾರಕ್ಕೆ ಅವಕಾಶ ಸಿಗುತ್ತೆ ಎನ್ನಲು ಸಾಧ್ಯವಿಲ್ಲ. ಒಂದು ಗಂಟೆಯಿಂದ ಹಿಡಿದು ಮೂರ್ನಾಲ್ಕು ದಿನ ಶವಸಂಸ್ಕಾರಕ್ಕಾಗಿ ಕಾಯುವ ಪರಿಸ್ಥಿತಿ ಬರುವುದುಂಟು. ಇದನ್ನೇ ಬಂಡವಾಳ ಮಾಡಿಕೊಂಡ ಹಿಸಾಯೋಶಿ ಲಾಸ್ಟೆಲ್ ಹೆಸರಿನ ಹೊಟೇಲ್ ಶುರುಮಾಡಿದ್ದಾನೆ.

ಈ ಹೊಟೇಲ್ ನಲ್ಲಿ ಶವಗಳಿರುತ್ತವೆ. ಮೃತರ ಸಂಬಂಧಿಕರು ಈ ಹೊಟೇಲ್ ನಲ್ಲಿ ಶವವನ್ನು ಇಡಬಹುದು. ಅಂತ್ಯಸಂಸ್ಕಾರಕ್ಕೆ ದಿನಗಟ್ಟಲೆ ಕಾಯುವ ಪರಿಸ್ಥಿತಿ ಬಂದವರು ಹಾಗೂ ಚಿಕ್ಕ ಮನೆ ಹೊಂದಿರುವವರು ಶವವನ್ನು ಹೊಟೇಲ್ ನಲ್ಲಿ ಇಡುತ್ತಾರೆ. ಶವ ಕೊಳೆಯುತ್ತೆ ಎಂಬ ಚಿಂತೆಯೂ ಇಲ್ಲಿರೋದಿಲ್ಲ. ಆದ್ರೆ ಒಂದು ದಿನಕ್ಕೆ 12000 ಯೇನ್ ನೀಡಬೇಕಾಗುತ್ತದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...