alex Certify
ಕನ್ನಡ ದುನಿಯಾ       Mobile App
       

Kannada Duniya

ಡಿವೋರ್ಸ್ ಕೊಡಿಸುತ್ತೆ ಈ ಹೊಟೇಲ್ !

Young couple having marriage problems

ಈ ಹೊಟೇಲ್ ನಲ್ಲಿ ಯಾರು ಬೇಕಾದರೂ ರೂಮ್ ಬುಕ್ ಮಾಡುವ ಹಾಗಿಲ್ಲ. ಪ್ರವಾಸಿಗರೂ ಇದನ್ನು ಬುಕ್ ಮಾಡುವುದಿಲ್ಲ. ಏಕೆಂದರೆ ಇದೊಂದು ಡಿವೋರ್ಸ್ ಹೊಟೇಲ್. ವಿಚ್ಛೇದನ ಪಡೆಯಲು ಬಯಸುವವರು ಮಾತ್ರ ಬುಕ್ ಮಾಡುವ ಹೊಟೇಲ್ ಇದು.

ಈ ವಿಚಿತ್ರ ಹೊಟೇಲ್ ಇರುವುದು ನೆದರ್ಲ್ಯಾಂಡಿನಲ್ಲಿ. ಇದರ ಹೆಸರು ‘ಡಿವೋರ್ಸ್ ಡಾಟ್ ಕಾಮ್’. ಎಲ್ಲ ಹೊಟೇಲ್ ಗಳಲ್ಲಿ ವೇಟರ್ ಗಳಿದ್ದಂತೆ ಈ ಹೊಟೇಲ್ ನಲ್ಲಿ ವಕೀಲರಿರುತ್ತಾರೆ. ವಿಚ್ಛೇದನ ಪಡೆಯಲು ಬಂದ ದಂಪತಿಗಳು ಯಾವ ಲಾಯರ್ ಬೇಕೋ ಅವರನ್ನು ಆರಿಸಿಕೊಳ್ಳಬಹುದು.

ವಿಚ್ಛೇದನ ಪಡೆಯಲು ಬಂದವರಿಗೆ ಬಹು ಬೇಗ ವಿಚ್ಛೇದನ ಕೊಡಿಸುವುದೇ ನಮ್ಮ ಕೆಲಸ ಎನ್ನುತ್ತಾರೆ ಹೊಟೆಲ್ ನಿರ್ದೇಶಕ ಹಾಲ್ಫೆಸ್. ಇಲ್ಲಿ ಕೇವಲ ನಾಲ್ಕೇ ನಾಲ್ಕು ದಿವಸದಲ್ಲಿ ಕಾನೂನು ಪ್ರಕಾರ ವಿಧಿವತ್ತಾದ ಡಿವೋರ್ಸ್ ಸಿಗುತ್ತೆ. ಒಟ್ಟಿನಲ್ಲಿ ಹೊಸ ಮಾದರಿಯ ಈ ಹೊಟೇಲ್ ಎಲ್ಲರ ಗಮನ ಸೆಳೆದಿರುವುದಂತೂ ನಿಜ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...