alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಪೊಲೀಸರನ್ನು ನೋಡಿ ಅರೆಸ್ಟ್ ಆಗ್ತೀನಿ ಎನ್ನುತ್ತಿದ್ದಾರೆ ಮಹಿಳೆಯರು

ಪೊಲೀಸ್ ಅಧಿಕಾರಿಗಳು ಅಂದ್ರೆ ಜನರಿಗೆ ಒಂದು ರೀತಿಯ ಭಯ, ಗೌರವ ಸಹಜ. ಆದ್ರೆ ಅಮೆರಿಕದ ಮೂವರು ಪೊಲೀಸರನ್ನು ನೋಡಿ ಮಹಿಳೆಯರಂತೂ ಫಿದಾ ಆಗ್ಬಿಟ್ಟಿದ್ದಾರೆ.

ಇವರು ಗೇನ್ಸ್ ವಿಲ್ಲೆ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸ್ತಾರೆ. ನೊರ್ಡ್ಮನ್, ಹಮಿಲ್ ಹಾಗೂ ರೆಂಜರಿಂಗ್ ಅನ್ನೋ ಮೂವರು ಅಧಿಕಾರಿಗಳು ಜೊತೆಯಾಗಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಅದನ್ನು ಸಾಮಾಜಿಕ ತಾಣದಲ್ಲಿ ಅಪ್ಲೋಡ್ ಮಾಡಿದ್ರು. ಈ ಫೋಟೋಗೆ 1.60 ಲಕ್ಷ ಕಮೆಂಟ್ಸ್ ಹರಿದು ಬಂದಿದೆ. 5 ಲಕ್ಷ ಮಂದಿ ಇದನ್ನು ಲೈಕ್ ಮಾಡಿದ್ದಾರೆ.

ಮೂವರು ಪೊಲೀಸ್ ಅಧಿಕಾರಿಗಳ ಫಿಟ್ನೆಸ್ ಹಾಗೂ ಸೌಂದರ್ಯ ನೋಡಿ ಮಹಿಳೆಯರೆಲ್ಲ ಬೆರಗಾಗಿದ್ದಾರೆ. ಅಷ್ಟೇ ಅಲ್ಲ ಈ ಪೊಲೀಸರು ಬರ್ತಾರೆ ಅಂದ್ರೆ ಅರೆಸ್ಟ್ ಆಗೋಕೂ ಸಿದ್ಧ ಎನ್ನುತ್ತಿದ್ದಾರೆ. ಈ ಕಮೆಂಟ್ಸ್, ಲೈಕ್ಸ್ ನೋಡಿ ಅಧಿಕಾರಿಗಳೇ ನಾಚಿಕೊಳ್ತಿದ್ದಾರಂತೆ.

ಅವರ ಪತ್ನಿಯರು ಕೂಡ ತಮ್ಮ ಗಂಡಂದಿರಿಗೆ ಈ ಪರಿ ಜನಪ್ರಿಯತೆ ಇದ್ಯಾ ಅಂತಾ ಬೆರಗಾಗಿದ್ದಾರೆ. ಏನಾದ್ರೂ ಸಮಸ್ಯೆ ಉಂಟಾದಾಗ 911ಗೆ ಕರೆ ಮಾಡಿ, ಈ ಅಧಿಕಾರಿಗಳನ್ನೇ ಸಹಾಯಕ್ಕೆ ಕಳುಹಿಸಿಕೊಡುವಂತೆ ಕೇಳಬೇಡಿ ಅಂತಾ ಪೊಲೀಸ್ ಇಲಾಖೆ ಈಗ ಮಹಿಳೆಯರಲ್ಲಿ ಮನವಿ ಮಾಡಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...