alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಂಕಾಂಗ್ ಪ್ರವಾಸಕ್ಕೆ ವೀಸಾ ಕಡ್ಡಾಯ

hong-kong

ಹೊಸ ವರ್ಷ ಹಾಂಕಾಂಗ್ ಗೆ ಹೋಗುವ ಪ್ಲಾನ್ ಮಾಡಿದ್ದರೆ ಈ ಸುದ್ದಿ ನಿಮಗೆ ಬಹಳ ಲಾಭಕರವಾಗೋದ್ರಲ್ಲಿ ಎರಡು ಮಾತಿಲ್ಲ. ಇನ್ಮುಂದೆ ವೀಸಾ ಇಲ್ಲದೆ ಭಾರತೀಯರು ಹಾಂಕಾಂಗ್ ಪ್ರವಾಸ ಕೈಗೊಳ್ಳುವಂತಿಲ್ಲ. ಹಾಂಕಾಂಗ್ ಸರ್ಕಾರ ವೀಸಾಮುಕ್ತ ಪ್ರವಾಸದ ನಿಯಮವನ್ನು ವಾಪಸ್ ಪಡೆದಿದೆ.

ಹಾಂಕಾಂಗ್ ನ ವಲಸೆ ಇಲಾಖೆ ಮಂಗಳವಾರ ತನ್ನ ವೆಬ್ ಸೈಟ್ ನಲ್ಲಿ ಈ ವಿಷಯವನ್ನು ಪ್ರಕಟಿಸಿದೆ. ಭಾರತೀಯ ಪ್ರವಾಸಿಗರು ಹಾಂಕಾಂಗ್ ಪ್ರವಾಸ ಮಾಡುವ ಮೊದಲು ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕೆಂದು ತಿಳಿಸಿದೆ. ಜನವರಿ 23 ರಿಂದ ನೋಂದಣಿ ಇಲ್ಲದೆ ಹಾಂಕಾಂಗ್ ಪ್ರವಾಸ ಕೈಗೊಳ್ಳುವಂತಿಲ್ಲ ಎಂದಿದೆ.

ಆನ್ಲೈನ್ ಮೂಲಕ ಭಾರತೀಯ ನಾಗರೀಕರು ನೋಂದಣಿ ಅರ್ಜಿಯನ್ನು ತುಂಬಬೇಕಾಗುತ್ತದೆ. ವಿಮಾನ ಮಾರ್ಗದ ಮೂಲಕ ಹಾಂಕಾಂಗ್ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಮತ್ತೊಂದು ವಿಮಾನ ಏರುವವರಿಗೆ ಈ ನೋಂದಣಿ ಪ್ರಕ್ರಿಯೆ ಅಗತ್ಯವಿಲ್ಲ.

ಹಿಂದೆ ಅನೇಕ ಕಾರಣಗಳಿಗೆ ವೀಸಾ ಇಲ್ಲದೆ ಹಾಂಕಾಂಗ್ ಗೆ ಪ್ರವಾಸ ಕೈಗೊಳ್ತಾ ಇದ್ದರು. 14 ದಿನಗಳ ಕಾಲ ಹಾಂಕಾಂಗ್ ನಲ್ಲಿ ಇದ್ದು ಬರುವ ಅವಕಾಶವಿತ್ತು. ಹಾಂಕಾಂಗ್ ಚೀನಾದ ವಿಶೇಷ ಆಡಳಿತ ಪ್ರದೇಶವಾಗಿದ್ದು, ಚೀನಾದ ಒತ್ತಡದ ಹಿನ್ನೆಲೆಯಲ್ಲಿ ಹಾಂಕಾಂಗ್ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗ್ತಾ ಇದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...