alex Certify
ಕನ್ನಡ ದುನಿಯಾ       Mobile App
       

Kannada Duniya

ನಡುರಾತ್ರಿಯಲ್ಲಿ ಸಿಸಿ ಟಿವಿ ದೃಶ್ಯ ನೋಡಿ ಬೆಚ್ಚಿಬಿದ್ದಿದ್ದ ಮನೆ ಯಜಮಾನ

naked-man-rattles-door-cctv-footage-wp_650x400_51496544117

ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ನಡೆದಿರೋ ಘಟನೆ ಇದು. ಮಧ್ಯರಾತ್ರಿ ಸಮಯ, ಆ ಮನೆಯಲ್ಲಿ ಎಲ್ಲರೂ ಮಲಗಿದ್ರು. ಇಬ್ಬರು ಮಕ್ಕಳು, ಪತಿ-ಪತ್ನಿ ಎಲ್ಲರೂ ಗಾಢ ನಿದ್ದೆಯಲ್ಲಿದ್ರು. ಇದ್ದಕ್ಕಿದ್ದಂತೆ ಮನೆಯ ಹೊರಭಾಗದಲ್ಲಿದ್ದ ಸೆಕ್ಯೂರಿಟಿ ಸಿಸ್ಟಮ್ ನಿಂದ ಮೆಸೇಜ್ ಬಂದಿದ್ದು. ಮೆಸೇಜ್ ಸದ್ದಿಗೆ ಮನೆಯ ಯಜಮಾನನಿಗೆ ಎಚ್ಚರವಾಗಿದೆ.

ವ್ಯಕ್ತಿಯೊಬ್ಬ ಮನೆ ಬಾಗಿಲಲ್ಲಿ ಕಾಣಿಸಿಕೊಂಡಿರೋದಾಗಿ ಸಂದೇಶ ಬಂದಿತ್ತು. ಕೂಡಲೇ ನಿದ್ದೆಯಿಂದೆದ್ದ ಮನೆಯ ಯಜಮಾನ ಸಿಸಿ ಟಿವಿಯನ್ನು ಪರಿಶೀಲಿಸಿದ್ದಾನೆ. ಅದರಲ್ಲಿದ್ದ ದೃಶ್ಯವನ್ನು ನೋಡಿ ಆತ ಅಕ್ಷರಶಃ ಬೆಚ್ಚಿಬಿದ್ದಿದ್ದ. ವ್ಯಕ್ತಿಯೊಬ್ಬ ಮನೆಯ ಬಾಗಿಲ ಬಳಿ ನಿಂತಿದ್ದ.

ಆತನ ಮೈಮೇಲೆ ಬಟ್ಟೆಯೇ ಇರಲಿಲ್ಲ. ಸಂಪೂರ್ಣ ವಿವಸ್ತ್ರನಾಗಿದ್ದ ಆ ವ್ಯಕ್ತಿ ಮನೆಯೊಳಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ. ಅಷ್ಟರಲ್ಲಿ ಲೈಟ್ ಬೆಳಗಿದ್ದರಿಂದ ಕತ್ತಲಲ್ಲಿ ಮರೆಯಾಗಿದ್ದಾನೆ. ಈ ವಿಡಿಯೋವನ್ನು ಪೊಲೀಸರು ಬಿಡುಗಡೆ ಮಾಡಿದ್ದು, ಆತನ ಸುಳಿವು ಸಿಕ್ಕಲ್ಲಿ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...