alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆ-ಮಠವಿಲ್ಲದ ಭಿಕ್ಷುಕನೀಗ 2.5 ಕೋಟಿ ಮೌಲ್ಯದ ಆಸ್ತಿಗೆ ಒಡೆಯ

ಯಾರಿಗಾದ್ರೂ ಉಪಕಾರ ಮಾಡಿದ್ರೆ ಅದಕ್ಕೆ ತಕ್ಕ ಪ್ರತಿಫಲ ಸಿಗುತ್ತೆ ಅನ್ನೋದಕ್ಕೆ ಇದೊಂದು ತಾಜಾ ನಿದರ್ಶನ. ಮನೆ-ಮಠವಿಲ್ಲದ ಕಡು ಬಡವನೊಬ್ಬ 15 ಡಾಲರ್ ಮೌಲ್ಯದ ಪೆಟ್ರೋಲ್ ಕೊಟ್ಟು ಸಹಕರಿಸಿದ್ದ. ಅದಕ್ಕೆ ಪ್ರತಿಫಲವಾಗಿ ಆತನಿಗೆ ಸ್ವಂತ ಮನೆ ಹಾಗೂ ಲಾರಿ ಸಿಗ್ತಿದೆ.

ಕೇಟ್ ಮೆಕ್ಲೂರ್ ಎಂಬ ಮಹಿಳೆಯ ಕಾರಿನಲ್ಲಿದ್ದ ಪೆಟ್ರೋಲ್ ದಾರಿಮಧ್ಯೆ ಖಾಲಿಯಾಗಿಬಿಟ್ಟಿತ್ತು. ಪೆಟ್ರೋಲ್ ಹಾಕಿಸಲು ಅವಳ ಬಳಿ ನಯಾಪೈಸೆ ಇರಲಿಲ್ಲ. ಭಿಕ್ಷೆ ಬೇಡಿ ಬದುಕು ಸಾಗಿಸ್ತಾ ಇದ್ದ ಜಾನಿ ಬಾಬಿಟ್ ಅವಳ ಪರಿಸ್ಥಿತಿ ನೋಡಿ, ತನ್ನ ಬಳಿಯಿದ್ದ 15 ಡಾಲರ್ ಕೊಟ್ಟು ಕೇಟ್ ಗೆ ಪೆಟ್ರೋಲ್ ತಂದಿದ್ದ.

ಅವನ ಸಹಾಯವನ್ನು ಕೇಟ್ ಮರೆಯಲಿಲ್ಲ. ಮನೆಗೆ ಹೋಗಿ ಆತನಿಗಾಗಿ ಸ್ವೆಟರ್, ಟೋಪಿ, ಶಾಲು, ಸಾಕ್ಸ್ ಎಲ್ಲವನ್ನೂ ತಂದುಕೊಟ್ಟಿದ್ಲು. ಆತನಿಗಾಗಿ ಗೋ ಫಂಡ್ ಮಿ ಅನ್ನೋ ಪೇಜ್ ಆರಂಭಿಸಿ, ಕ್ರೌಡ್ ಫಂಡಿಂಗ್ ಶುರು ಮಾಡಿದ್ಲು. ಅದರಲ್ಲಿ 400,000 ಡಾಲರ್ ಹಣ ಸಂಗ್ರಹವಾಗಿದೆ.

ಸ್ವಂತ ಮನೆ ಹಾಗೂ ಲಾರಿ ಖರೀದಿಸಬೇಕು ಅನ್ನೋದು ಜಾನಿಯ ಕನಸಾಗಿತ್ತು. ಈಗ ಅದು ನನಸಾಗ್ತಿದೆ. ದಾನಿಗಳು ಕೊಟ್ಟಿರೋ ಹಣದಿಂದ ಜಾನಿ ಮನೆ ಮತ್ತು ಲಾರಿ ಖರೀದಿ ಮಾಡ್ತಿದ್ದಾನೆ. ತಿರುಕನಾಗಿದ್ದ ಜಾನಿ ಒಂದೇ ರಾತ್ರಿಯಲ್ಲಿ ಲಕ್ಷಾಧೀಶನಾಗಿ ಬದಲಾಗಿದ್ದಾನೆ. ಇದೆಲ್ಲವೂ ಆತ ಮಾಡಿದ ಒಂದೊಳ್ಳೆ ಕೆಲಸಕ್ಕೆ ಸಿಕ್ಕ ಪ್ರತಿಫಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...