alex Certify
ಕನ್ನಡ ದುನಿಯಾ       Mobile App
       

Kannada Duniya

ನಿರ್ಗತಿಕನ ಪಾಲಾಯ್ತು 2.28 ಕೋಟಿ ರೂ.

ಪ್ಯಾರಿಸ್ ಏರ್ಪೋರ್ಟ್ ನಲ್ಲಿ ಭಿಕ್ಷೆ ಬೇಡುತ್ತಿದ್ದ ನಿರ್ಗತಿಕನಿಗೆ ಬಂಪರ್ ಲಾಟರಿ ಹೊಡೆದಿದೆ. ಫೈನಾನ್ಸ್ ಕಂಪನಿಯೊಂದರ ಕಚೇರಿಯಲ್ಲಿ 300,000 ಯುರೋಸ್ ಹಣ ಸಿಕ್ಕಿದೆ. ಕಚೇರಿ ಬಾಗಿಲು ತೆರೆದುಕೊಂಡೇ ಇತ್ತು, ಆರಾಮಾಗಿ ಒಳ ಪ್ರವೇಶಿಸಿದ ಆತ ಹಣ ತೆಗೆದುಕೊಂಡು ಹೋಗಿದ್ದಾನೆ.

ಲೂಮಿಸ್ ಕ್ಯಾಶ್ ಮ್ಯಾನೇಜ್ಮೆಂಟ್ ಕಂಪನಿಯಲ್ಲಿ ಈ ಘಟನೆ ನಡೆದಿದೆ. ಕಚೇರಿಯ ಮುಖ್ಯ ಬಾಗಿಲು ಹಾರು ಹೊಡೆದುಕೊಂಡಿತ್ತು. ಒಳ ಪ್ರವೇಶಿಸಿ ನೋಡಿದಾಗ ಎರಡು ಕಂಪಾರ್ಟ್ಮೆಂಟ್ ಗಳಲ್ಲಿ ಹಣ ತುಂಬಿದ್ದ ಚೀಲವನ್ನು ಇಡಲಾಗಿತ್ತು. ಭಿಕ್ಷುಕ ಕೊಂಚವೂ ತಡಮಾಡಲಿಲ್ಲ.

ಹಣ ಎತ್ತಿಕೊಂಡು ಅಲ್ಲಿಂದ ಹೊರಟು ಹೋಗಿದ್ದಾನೆ. ಕಚೇರಿಯ ಬಾಗಿಲನ್ನು ತೆರೆದಿಟ್ಟವರು ಯಾರು ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಈ ಕೃತ್ಯವನ್ನು ಅಪರಾಧ ಅನ್ನೋದಕ್ಕಿಂತ, ಆ ನಿರ್ಗತಿಕನ ಅದೃಷ್ಟ ಇದು ಅಂತಾ ಪೊಲೀಸರು ಕೂಡ ಹೇಳ್ತಿದ್ದಾರೆ. 50ರ ಆಸುಪಾಸಿನ ಆ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...