alex Certify
ಕನ್ನಡ ದುನಿಯಾ       Mobile App
       

Kannada Duniya

ಫಲಕ ತೂಗು ಹಾಕಿಕೊಂಡಿದ್ದವನಿಗೆ ಕೊನೆಗೂ ಸಿಕ್ತು ಕೆಲಸ

ಕ್ಯಾಲಿಫೋರ್ನಿಯಾ: ಇಂದಿನ ದಿನದಲ್ಲಿ ಸಾಮಾಜಿಕ ತಾಣಗಳು ಏನು ಮಾಡುವುದಿಲ್ಲ ಹೇಳಿ?
ಒಬ್ಬರನ್ನು ಬಂಧಿಸುವುದರಿಂದ ಹಿಡಿದು ಪ್ರಶಸ್ತಿಗೆ ಪಾತ್ರವಾಗುವಂತೆ ಮಾಡುವ ಶಕ್ತಿ ಇಂದು ಸಾಮಾಜಿಕ ತಾಣಗಳು ಹೊಂದಿವೆ.

ಕ್ಯಾಲಿಫೋರ್ನಿಯಾದಲ್ಲಿ ಕೆಲಸಕ್ಕಾಗಿ ಕುತ್ತಿಗೆಗೆ ಫಲಕ ನೇತು ಹಾಕಿ, ದಾರಿ ಬದಿಯಲ್ಲಿದ್ದ ವ್ಯಕ್ತಿಯೋರ್ವನಿಗೆ ಇಂದು ಸುಮಾರು 200 ಸಂಸ್ಥೆಗಳು ಕೆಲಸ ನೀಡಲು ಮುಂದಾಗಿವೆ.

ಮನೆ ಇಲ್ಲ, ಯಶಸ್ಸಿನ ಹಸಿವು, ರೆಸ್ಯೂಮ್‌ ನೋಡಿ ಎಂಬುದಾಗಿ ಕುತ್ತಿಗೆಗೆ ಫಲಕ ಹಾಕಿ, ರಸ್ತೆ ಬದಿಯಲ್ಲಿದ್ದ ವ್ಯಕ್ತಿಯ ಫೋಟೋ ಟ್ವಿಟರ್‌ನಲ್ಲಿ ವೈರಲ್‌ ಆಗಿದೆ. ಇನ್‌ಫಾರ್ಮೇಷನ್‌ ಸಿಸ್ಟಮ್ಸ್‌ ಮ್ಯಾನೇಜ್‌ಮೆಂಟ್‌ ವಿಭಾಗದಲ್ಲಿ ಪದವಿ ಪಡೆದಿರುವ ಕ್ಯಾಸರೆಜ್, ಕೆಲಸ ನೀಡಿ ಎಂಬ ಸಹಾಯದ ಫಲಕ ಕುತ್ತಿಗೆಗೆ ಹಾಕಿಕೊಂಡು ದಾರಿಯಲ್ಲಿ ನಿಂತವರು.

ಟ್ವಿಟರ್‌ನಲ್ಲಿ ಈತನ ಬಗ್ಗೆ ಪೋಸ್ಟ್‌ ಮಾಡಿದ್ದೇ ತಡ, ಗೂಗಲ್‌, ಆಪಲ್‌, ಬಿಟ್‌ಕಾಯಿನ್‌ ಸೇರಿದಂತೆ ಅನೇಕ ಸಂಸ್ಥೆಗಳು ಈತನನ್ನು ಕೆಲಸಕ್ಕಾಗಿ ಆಹ್ವಾನಿಸಿವೆ. ಶನಿವಾರ ಕ್ಯಾಸರೆಜ್ ಬಗ್ಗೆ ಮಾಡಿರುವ ಪೋಸ್ಟ್‌ 2.1 ಲಕ್ಷ ಲೈಕ್‌ ಬಂದಿವೆ, 1.3 ಲಕ್ಷ ರಿಟ್ವೀಟ್‌ಗಳು ಬಂದಿವೆ. ಪೋಸ್ಟ್‌ ಮಾಡಿದವರಿಗೆ ಕ್ಯಾಸರೆಜ್ ಧನ್ಯವಾದ ಅರ್ಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...