alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಷುಲ್ಲಕ ಕಾರಣಕ್ಕೆ ಗುಂಡಿಕ್ಕಿದ್ದಾಳೆ ಯುವತಿ

ತಡರಾತ್ರಿ 3 ಗಂಟೆ ಸಮಯ. ಅಮೆರಿಕದ ಮನರಂಜನಾ ತಾಣ ಎನಿಸಿಕೊಂಡಿರೋ ನ್ಯಾಶ್ವಿಲ್ಲೆಯ ಮ್ಯೂಸಿಕ್ ರೋನಲ್ಲಿ ರಸ್ತೆ ಬದಿ ಮಲಗಿದ್ದ ಗೆರಾಲ್ಡ್ ಮೆಲ್ಟನ್ ನಿದ್ದೆ ಮಾಡಲು ಪ್ರಯತ್ನಿಸ್ತಿದ್ದ. 54 ವರ್ಷದ ಗೆರಾಲ್ಡ್ ಗೆ ಮನೆಯೇ ಇರಲಿಲ್ಲ.

ಹತ್ತಿರದಲ್ಲೇ ನಿಂತಿದ್ದ ಪೋರ್ಷೆ ಎಸ್ ಯು ವಿ ಕಾರಿನಲ್ಲಿ ಸಂಗೀತದ ಅಬ್ಬರ ಜೋರಾಗಿತ್ತು. ಕಾರಿನಿಂದ ಹೊಗೆ ಮತ್ತು ವಾಸನೆ ಹೊರಹೊಮ್ಮುತ್ತಿತ್ತು. ಇದರಿಂದ ಎಷ್ಟೇ ಕಸರತ್ತು ಮಾಡಿದ್ರೂ ಗೆರಾಲ್ಡ್ ಗೆ ನಿದ್ದೆ ಬರುತ್ತಿರಲಿಲ್ಲ. ಹಾಗಾಗಿ ಕಾರನ್ನು ಕೊಂಚ ಬದಿಗೆ ನಿಲ್ಲಿಸುವಂತೆ ಗೆರಾಲ್ಡ್ ಮನವಿ ಮಾಡಿಕೊಂಡಿದ್ದಾನೆ.

ಅಷ್ಟಕ್ಕೇ ಕೋಪಕೊಂಡ ಕಾರು ಚಾಲಕಿ, 26 ವರ್ಷದ ಕೇಟೀ ಎಂಬಾಕೆ ಗೆರಾಲ್ಡ್ ಮೇಲೆ ಗುಂಡು ಹಾರಿಸಿದ್ದಾಳೆ. ನಂತರ ಅಲ್ಲಿಂದ ಪರಾರಿಯಾಗಿದ್ದಾಳೆ. ಒಂದು ಗುಂಡು ಗೆರಾಲ್ಡ್ ನ ಹೊಟ್ಟೆಗೆ ಹೊಕ್ಕಿತ್ತು. ಗೆರಾಲ್ಡ್ ಆಸ್ಪತ್ರೆ ಸೇರಿದ್ದು, ಆರೋಪಿ ಕೇಟಿಯನ್ನು ಪೊಲೀಸರು ಬಂಧಿಸಿದ್ರು. ಆದ್ರೆ ಜಾಮೀನಿನ ಮೇಲೆ ಆಕೆ ಬಿಡುಗಡೆಯಾಗಿದ್ದಾಳೆ.

ಕೇಟೀ ಈ ರೀತಿ ದುರ್ವರ್ತನೆ ತೋರಿರೋದು ಇದೇ ಮೊದಲೇನಲ್ಲ. ಈ ಹಿಂದೆ ಮದ್ಯದ ಗ್ಲಾಸ್ ಅನ್ನೇ ಮಹಿಳೆಯೊಬ್ಬಳ ತಲೆ ಮೇಲೆ ಕುಕ್ಕಿಬಿಟ್ಟಿದ್ದಳು. ನಾಲ್ಕು ವರ್ಷಗಳ ಹಿಂದೆ ಇನ್ನೋರ್ವ ಮಹಿಳೆ ಮೇಲೂ ಹಲ್ಲೆ ಮಾಡಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...