alex Certify
ಕನ್ನಡ ದುನಿಯಾ       Mobile App
       

Kannada Duniya

ದೇಶ ತೊರೆಯಲಿದ್ದ ಭಾರತೀಯನಿಗೆ ಹೊಡೀತು ಬಂಪರ್ ಲಾಟರಿ

ಅದೃಷ್ಟ ಎಲ್ಲಾ ಕಷ್ಟಗಳನ್ನು ಒದ್ದುಕೊಂಡು ಬರುತ್ತೆ ಅನ್ನೋದು ಇದಕ್ಕೆ ಇರಬೇಕು. ಜೀವನದಲ್ಲಿ ಕಷ್ಟಗಳನ್ನೇ ನೋಡುತ್ತಾ ಬಂದಿದ್ದ, ಇನ್ನು ಕೆಲವೇ ದಿನಗಳಲ್ಲಿ ಅರಬ್ ರಾಷ್ಟ್ರವನ್ನು ತೊರೆದು ಭಾರತಕ್ಕೆ ಬರಬೇಕು ಅಂದುಕೊಂಡಿದ್ದ ಭಾರತೀಯರಿಬ್ಬರಿಗೆ ಜಾಕ್ಪಾಟ್ ಲಾಟರಿ ಹೊಡೆದಿದೆ. ಕುವೈತ್ ನಲ್ಲಿ ವಾಸವಿದ್ದ ಸಂದೀಪ್ ಮೆನನ್ ಎಂಬ ಭಾರತೀಯ ಈಗ ದುಬೈ ಲಾಟರಿಯಲ್ಲಿ ಒಂದು ಮಿಲಿಯನ್ ಹಣ ಗೆದ್ದಿದ್ದಾನೆ.

ದುಬೈ ತೆರಿಗೆ ರಹಿತ ಲಾಟರಿ ರಾಫೆಲ್ನಲ್ಲಿ ಸಂದೀಪ್ ಮೆನನ್ ಗೆ ಅದೃಷ್ಟ ಲಕ್ಷಿ ಒಲಿದು ಬಂದಿದ್ದಾಳೆ. ವಿಚಿತ್ರ ಏನಂದ್ರೆ 1999ರಲ್ಲಿ ಶುರುವಾದ ಈ ಲಾಟರಿಯಲ್ಲಿ ಇಷ್ಟು ದೊಡ್ಡ ಬಹುಮಾನದ ಮೊತ್ತವನ್ನು ಯಾರೂ ಗೆದ್ದಿರಲಿಲ್ಲ. ಜೀವನದಲ್ಲಿ ದೊಡ್ಡ ಮಟ್ಟದಲ್ಲಿ ಏನನ್ನೂ ಗೆಲ್ಲದ ತನಗೆ ಇದು ನಿಜಕ್ಕೂ ದೊಡ್ಡ ಉಡುಗೊರೆ ಎಂದಿದ್ದಾನೆ ಸಂದೀಪ್ ಮೆನನ್

ಸಂದೀಪ್ ಗೆ ಈ ಲಾಟರಿಯಲ್ಲಿ ಒಂದು ಮಿಲಿಯನ್ ಹಣ ಸಿಕ್ಕಿದ್ರೆ ಮತ್ತೊಬ್ಬ ಭಾರತೀಯನಿಗೆ ಬಿಎಂಡಬ್ಲ್ಯುನ ಐಷಾರಾಮಿ ಕಾರು ಸಿಕ್ಕಿದೆ. ದುಬೈ ಮೂಲದ ಸನತ್ ರೈ ಎಂಬ ಭಾರತೀಯನಿಗೆ ಬಿಎಂಎಡಬ್ಲ್ಯು 750 ಲಿ ಲಕ್ಷುರಿ ವಾಹನದ ಬಹುಮಾನ ಸಿಕ್ಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...