alex Certify
ಕನ್ನಡ ದುನಿಯಾ       Mobile App
       

Kannada Duniya

ಹೋಳಿ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಣೆ

holy

ಬಣ್ಣಗಳ ರಂಗಿನಾಟ ಹೋಳಿ ಹಬ್ಬ ಬಂತೆಂದರೆ ಸಂಭ್ರಮ ಜೋರಾಗಿರುತ್ತದೆ. ಹೋಳಿ ಹಬ್ಬದ ಸಂದರ್ಭದಲ್ಲಿ ರಜೆ ಇಲ್ಲದ ಕಾರಣ, ಬಿಡುವಿನ ವೇಳೆಯಲ್ಲಿ ಮಾತ್ರ ಹಬ್ಬ ಆಚರಿಸುತ್ತಿದ್ದವರಿಗೆ, ಖುಷಿಯ ವಿಚಾರವೊಂದು ಹೊರಬಿದ್ದಿದೆ. ಹೋಳಿ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.

ಆದರೆ ಇದು ಭಾರತದಲ್ಲಲ್ಲ. ನೆರೆ ರಾಷ್ಟ್ರ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಎಂಬುದು ಗಮನಾರ್ಹ. ಹಿಂದೂ ಧಾರ್ಮಿಕ ಹಬ್ಬ ಹೋಳಿ ಪ್ರಯುಕ್ತ, ಇಲ್ಲಿ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಇದೇ ಮೊದಲ ಬಾರಿಗೆ ಹೋಳಿ ಹಬ್ಬಕ್ಕೆ ಪಾಕ್ ನ ಸಿಂಧ್ ಪ್ರಾಂತ್ಯದಲ್ಲಿ ಹೋಳಿ ಹಬ್ಬಕ್ಕೆ ರಜೆ ಘೋಷಿಸಿದ್ದು, ಸಂಭ್ರಮವನ್ನು ಹೆಚ್ಚಿಸುವಂತೆ ಮಾಡಿದೆ. ಹಿಂದೆ ಈ ಪ್ರಾಂತ್ಯದಲ್ಲಿ ಹಿಂದೂಗಳಿಗೆ ಮಾತ್ರ ಹೋಳಿ ಹಬ್ಬ ಆಚರಿಸಲು ರಜೆ ನೀಡಲಾಗುತ್ತಿತ್ತು. ಇದೀಗ ಮಾರ್ಚ್ 24 ರಂದು ಸಾರ್ವತ್ರಿಕ ರಜೆ ಘೋಷಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಪಾಕ್ ನಲ್ಲಿ ಅಲ್ಪ ಸಂಖ್ಯಾತರ ಹಬ್ಬದ ದಿನಗಳಂದು ರಜೆ ಘೋಷಿಸಬೇಕೆಂದು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಅದರಂತೆ ಇದೇ ಮೊದಲ ಬಾರಿಗೆ ಪಾಕ್ ಸಿಂಧ್ ಪ್ರಾಂತ್ಯದಲ್ಲಿ ಹೋಳಿಹಬ್ಬ ಆಚರಿಸಲು ಮಾರ್ಚ್ 24 ರಂದು ರಜೆ ಘೋಷಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...