alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸರ ಗುಂಡೇಟಿಗೆ ಹಾಲಿವುಡ್ ನಟಿ ಬಲಿ

ಹಾಲಿವುಡ್ ನಟಿ ವನೆಸ್ಸಾ ಮಾರ್ಕ್ವೆಜ್, ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾರೆ. ವಿಚಾರಣೆಗೆಂದು ನಟಿ ವನೆಸ್ಸಾ ಮನೆಗೆ ಪೊಲೀಸರು ಬಂದ ವೇಳೆ ನಟಿ, ತನ್ನ ಬಳಿಯಿದ್ದ ಆಟಿಕೆ ಪಿಸ್ತೂಲ್, ತೆಗೆದು ಗುಂಡು ಹಾರಿಸೋದಾಗಿ ಬೆದರಿಕೆ ಹಾಕಿದ್ದಾರೆ.

ಇದ್ರಿಂದ ವಿಚಲಿತರಾದ ಪೊಲೀಸರು, ಅಸಲಿ ಪಿಸ್ತೂಲ್ ಎಂದು ಭಾವಿಸಿ ನಟಿಯ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ನಟಿ ವನೆಸ್ಸಾ ಲಾಸ್ ಏಂಜಲೀಸ್ ನಲ್ಲಿ ವಾಸವಿದ್ದರು. ಮನೆಯ ಮಾಲೀಕರ ದೂರಿನ ಅನ್ವಯ ಪೊಲೀಸರು ಸ್ಥಳಕ್ಕೆ ಬಂದಿದ್ದರು.

ಈ ವೇಳೆ ಪೊಲೀಸರೊಂದಿಗೆ ವೈದ್ಯರು ಸಹ ಬಂದಿದ್ದರು. ನಟಿ ವನೆಸ್ಸಾ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಳು ಎಂದು ತಿಳಿದು ಬಂದಿದೆ. ಗುಂಡು ಹಾರಿಸೋದಕ್ಕೂ ಮುನ್ನ, ವೈದ್ಯರೊಂದಿಗೆ ನಟಿ ಸುಮಾರು 90 ನಿಮಿಷ ಮಾತುಕತೆ ನಡೆಸಿದ್ದಾರೆ. ಆದ್ರೆ, ಮಾನಸಿಕ ಸಮತೋಲವನ್ನು ಕಳೆದುಕೊಂಡ ನಟಿ ತಮ್ಮ ಬಳಿ ಇದ್ದ ಆಟಿಕೆಯ ಪಿಸ್ತೂಲ್ ತೋರಿಸಿದ್ದರಿಂದ ಈ ದುರ್ಘಟನೆ ನಡೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...