alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ವಿಶ್ವದ ಸುಂದರ ಮಹಿಳೆ ಪಟ್ಟಕ್ಕೇರಿದ ನಟಿ

capture88

ಹಾಲಿವುಡ್ ನ ನಟಿ ಹಾಗೂ ನಿರ್ಮಾಪಕಿ ಜೂಲಿಯಾ ರಾಬರ್ಟ್ಸ್ ಐದನೇ ಬಾರಿ ವಿಶ್ವದ ಅತ್ಯಂತ ಸುಂದರ ಮಹಿಳೆ ಎಂಬ ಪಟ್ಟವನ್ನಲಂಕರಿಸಿದ್ದಾಳೆ. ಪೀಪಲ್ಸ್ ಮ್ಯಾಗಜಿನ್ ಈ ಗೌರವ ನೀಡಿದೆ.

ಐದು ಬಾರಿ ವಿಶ್ವದ ಸುಂದರಿ ಎಂಬ ಪಟ್ಟ ಸಿಕ್ಕರೂ ಇನ್ನೂ ಉತ್ತಮ ಸಮಯ ಬಂದಿಲ್ಲ ಎನ್ನುತ್ತಾಳೆ ಬೆಡಗಿ. 49 ವರ್ಷದ ಜೂಲಿಯಾ ರಾಬರ್ಟ್ಸ್ 1991ರಲ್ಲಿ ಮೊದಲ ಬಾರಿ ಈ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಳು. ಹಾಲಿವುಡ್ ನ ಹಾಸ್ಯಭರಿಸ ರೋಮ್ಯಾಂಟಿಕ್ ಚಿತ್ರ Pretty Women ನಂತ್ರ ಜೂಲಿಯಾ ಭವಿಷ್ಯ ಬದಲಾಯ್ತು. ಇದಾದ ನಂತ್ರ 2000, 2005, 2010 ರಲ್ಲಿ ವಿಶ್ವದ ಅತ್ಯಂತ ಸುಂದರ ಮಹಿಳೆ ಎಂಬ ಪಟ್ಟ ಅಲಂಕರಿಸಿದ್ದಳು.

2001 ರಲ್ಲಿ Erin Brockovich ಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿ ಬಾಚಿಕೊಂಡಿದ್ದಾಳೆ ಜೂಲಿಯಾ. ಹಾಲಿವುಡ್ ಸಿನಿಮಾಟೋಗ್ರಾಫರ್ ಡೇನಿಯಲ್ ರಿಚರ್ಡ್ ಮಾಡರ್ ಜೊತೆ 14 ವರ್ಷಗಳ ಹಿಂದೆ ಜೂಲಿಯಾ ಮದುವೆಯಾಗಿತ್ತು. ಜೂಲಿಯಾಗೆ ಮೂವರು ಮಕ್ಕಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...