alex Certify
ಕನ್ನಡ ದುನಿಯಾ       Mobile App
       

Kannada Duniya

ಭದ್ರತೆಯಿಲ್ಲದೆ ಮುಂಬೈ ಸುತ್ತಿದ್ಲು ಈ ನಟಿ

ಜೇಮ್ಸ್ ಬಾಂಡ್ ಮತ್ತು ಎಕ್ಸ್ ಮೆನ್ ಚಿತ್ರಗಳಲ್ಲಿ ನಟಿಸಿರುವ ಆಸ್ಕರ್ ವಿಜೇತೆ ಹಾಲಿವುಡ್ ನಟಿ ಹಲ್ಲೆ ಬೆರ್ರಿ ಇತ್ತೀಚಿನ ದಿನಗಳಲ್ಲಿ ಬಣ್ಣದ ಲೋಕದಿಂದ ದೂರವಿದ್ದಾಳೆ. ಹಲ್ಲೆ ಬೆರ್ರಿ ಹಾಲಿವುಡ್ ನಿಂದ ದೂರವಿದ್ದು ಭಾರತದ ಮಾಯಾನಗರಿಯಲ್ಲಿ ಕಾಲ ಕಳೆಯುತ್ತಿದ್ದಾಳೆ.

ಹಲ್ಲೆ ಬೆರ್ರಿ ಇನ್ಸ್ಟ್ರಾಗ್ರಾಮ್ ನಲ್ಲಿ ಕೆಲ ಫೋಟೋಗಳನ್ನು ಹಾಕಿದ್ದಾಳೆ. ಜೊತೆಗೆ ತಾನು ಭಾರತದ ವಾಣಿಜ್ಯ ನಗರಿ ಮುಂಬೈನಲ್ಲಿರುವುದಾಗಿ ತಿಳಿಸಿದ್ದಾಳೆ. ಮುಂಬೈ ಬೀದಿಗಳಲ್ಲಿ ಬಿಂದಾಸ್ ಆಗಿ ಹಲ್ಲೆ ಬೆರ್ರಿ ಸುತ್ತಿದ್ದಾಳೆ. ವಿಶೇಷವೆಂದ್ರೆ ಆಕೆಯನ್ನು ಯಾರೂ ಗುರುತಿಸಲಿಲ್ಲ.

ಹಲ್ಲೆ ಬೆರ್ರಿ ಇನ್ಸ್ಟ್ರಾಗ್ರಾಮ್ ನಲ್ಲಿ ಫೋಟೋ ಹಾಕ್ತಿದ್ದಂತೆ ಮುಂಬೈ ಜನರಿಗೆ ಗೊತ್ತಾಗಿದೆ. ಸೂರ್ಯ ಮುಳುಗುವ ಫೋಟೋದಿಂದ ಹಿಡಿದು ಬೀದಿಯಲ್ಲಿ ಸುತ್ತಾಡಿದ ಫೋಟೋಗಳನ್ನು ಹಲ್ಲೆ ಬೆರ್ರಿ ಇನ್ಸ್ಟ್ರಾಗ್ರಾಮ್ ಗೆ ಹಾಕಿದ್ದಾಳೆ. ಮುಂಬೈನಲ್ಲಿ ಯಾಕಿದ್ದೇನೆಂಬುದನ್ನು ಹಲ್ಲೆ ಬೆರ್ರಿ ಹೇಳಿಲ್ಲ. ಆದ್ರೆ ಹಲ್ಲೆ ಬೆರ್ರಿ ಭಾರತದ ಮೇಲಿನ ಪ್ರೀತಿ ಹೊಸದಲ್ಲ. 2011 ರಲ್ಲಿ ಹಲ್ಲೆ ಬೆರ್ರಿ ಸೀರೆ, ಮೆಹಂದಿ ಹಾಗೂ ಬಳೆಗಳ ಜೊತೆ ಕಾಣಿಸಿಕೊಂಡಿದ್ದಳು.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...