alex Certify
ಕನ್ನಡ ದುನಿಯಾ       Mobile App
       

Kannada Duniya

ಹರಾಜಾಯ್ತು ಹಿಟ್ಲರ್ ಪತ್ನಿಯ ‘ಚಡ್ಡಿ’

hitler

ಅಡಾಲ್ಫ್ ಹಿಟ್ಲರ್ ಪತ್ನಿ ಎವಾ ಬ್ರೌನ್ ಅವರ ಎರಡು ಚಡ್ಡಿಗಳನ್ನು ಹರಾಜು ಹಾಕಲಾಗಿದೆ. ಇವು 2900 ಪೌಂಡ್ ಅಂದ್ರೆ ಸುಮಾರು 2.5 ಲಕ್ಷ ರೂಪಾಯಿಗೆ ಬಿಕರಿಯಾಗಿವೆ.

ಮಾಲ್ವೆರ್ನ್ ನಲ್ಲಿರೋ ಫಿಲಿಪ್ ಸೆರೆಲ್ ಹರಾಜು ಮನೆಯಲ್ಲಿ ಈ ಪ್ರಕ್ರಿಯೆ ನಡೀತು. ಹಿಟ್ಲರ್ ಪತ್ನಿಯ ಚಡ್ಡಿಗಳು 400 ಪೌಂಡ್ ಗೆ ಹರಾಜಾಗುವ ನಿರೀಕ್ಷೆ ಇತ್ತು, ಆದ್ರೆ ಲೇಸ್ ಮತ್ತು ರಿಬ್ಬನ್ ಟ್ರಿಮ್ ಇರುವ ಈ ಚಡ್ಡಿಗಳು ಭರ್ತಿ 2900 ಪೌಂಡ್ ಗೆ ಮಾರಾಟವಾಗಿವೆ.

ಕೇವಲ ಚಡ್ಡಿಗಳು ಮಾತ್ರವಲ್ಲ ಎವಾ ಬ್ರೌನ್ ರ ಒಂದು ಚಿನ್ನದ ಉಂಗುರ, ಕನ್ನಡಿ ಇರುವ ಬೆಳ್ಳಿಯ ಬಾಕ್ಸ್, ಕೆಂಪು ಲಿಪ್ ಸ್ಟಿಕ್ ಇರುವ ಬೆಳ್ಳಿಯ ಕೇಸ್ ಇವೆಲ್ಲವನ್ನೂ ಹರಾಜು ಹಾಕಲಾಗಿದೆ. 6 ರೂಬಿ ಇರುವ ಚಿನ್ನದುಂಗುರ 1250 ಪೌಂಡ್ ಗಳಿಗೆ ಹರಾಜಾದ್ರೆ, ಲಿಪ್ ಸ್ಟಿಕ್ 360 ಪೌಂಡ್ ಗೆ ಬಿಕರಿಯಾಗಿದೆ. ಅಡಾಲ್ಫ್ ಹಿಟ್ಲರ್ ಮತ್ತು ಎವಾ ಬ್ರೌನ್ ರ 20ನೇ ಶತಮಾನದ ಕಪ್ಪು-ಬಿಳುಪು ಫೋಟೋಗಳು ಕೂಡ 100 ಪೌಂಡ್ ಗೆ ಹರಾಜಾಗಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...