alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ರಿಟನ್ ಗೂ ತಲುಪಿದೆ ಪದ್ಮಾವತಿ ವಿವಾದದ ಕಿಚ್ಚು

ವಿವಾದಿತ ಚಿತ್ರ ಪದ್ಮಾವತಿ ವಿರುದ್ಧ ಹಿಂದು ಸಂಘಟನೆಗಳು ಹೋರಾಟ ಮುಂದುವರಿಸಿವೆ. ಕೇವಲ ಭಾರತದಲ್ಲಿ ಮಾತ್ರವಲ್ಲ, ಬ್ರಿಟನ್ ನಲ್ಲೂ ಈ ಚಿತ್ರ ಪ್ರದರ್ಶಿಸಿದ್ರೆ ಅಂತಹ ಥಿಯೇಟರ್ ಗಳನ್ನೇ ಸುಟ್ಟು ಬಿಡುವಂತೆ ಕರೆ ಕೊಟ್ಟಿವೆ.

ರಜ್ಪೂತ್ ಹಿಂದು ಸಂಘಟನೆಗಳು, ಪದ್ಮಾವತಿ ಚಿತ್ರವನ್ನು ನಿಷೇಧಿಸುವಂತೆ ಪಟ್ಟು ಹಿಡಿದಿವೆ. ವಿದೇಶಗಳಲ್ಲೂ ಚಿತ್ರ ಬಿಡುಗಡೆಗೆ ಅವಕಾಶ ಕೊಡಬಾರದು ಅನ್ನೋದು ಅವರ ಒತ್ತಾಯ. ಹಾಗಾಗಿ ಅಲ್ಲಿರುವ ಭಾರತೀಯರನ್ನು ರೊಚ್ಚಿಗೆಬ್ಬಿಸಲು ಪ್ರಯತ್ನಿಸುತ್ತಿವೆ.

ಪದ್ಮಾವತಿ ಚಿತ್ರ ಪ್ರದರ್ಶಿಸಿದ್ರೆ ಆ ಚಿತ್ರಮಂದಿರವನ್ನೇ ಸುಟ್ಟು ಹಾಕ್ತೀವಿ ಅಂತಾ ಕರ್ಣಿ ಸೇನಾ ಸಂಘಟನೆಯ ಸುಖದೇವ್ ಸಿಂಗ್ ಹೇಳಿದ್ದಾರೆ. ಭಾರತದಂತೆ ಬ್ರಿಟನ್ ನಲ್ಲಿರೋ ರಜ್ಪೂತ್ ಸಮುದಾಯದವರ ಬಳಿ ಪದ್ಮಾವತಿ ಚಿತ್ರದ ವಿರುದ್ಧ ಪ್ರತಿಭಟನೆ ನಡೆಸುವಂತೆ ಕರೆ ಕೊಟ್ಟಿರೋದಾಗಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...