alex Certify
ಕನ್ನಡ ದುನಿಯಾ       Mobile App
       

Kannada Duniya

ಕುರಿ ಮಾಂಸದ ಜಾಹೀರಾತಿನಲ್ಲಿ ಹಿಂದು ದೇವರ ಬಳಕೆ

ಮಾಂಸ ಭಕ್ಷಣೆಯನ್ನು ಪ್ರೋತ್ಸಾಹಿಸುವ ಜಾಹೀರಾತೊಂದರಲ್ಲಿ ಹಿಂದೂ ದೇವರಾದ ಗಣೇಶನನ್ನು ಬಳಸಿಕೊಂಡಿರೋದು ಆಸ್ಟ್ರೇಲಿಯಾದಲ್ಲಿರುವ ಹಿಂದುಗಳನ್ನು ಕೆರಳಿಸಿದೆ. ಗಣೇಶ, ಜೀಸಸ್, ಬುದ್ಧ, ಥಾರ್ ಮತ್ತು ಜೀಯಸ್ ಒಟ್ಟಾಗಿ ಡೈನಿಂಗ್ ಟೇಬಲ್ ಮೇಲೆ ಕುಳಿತು ಕುರಿ ಮಾಂಸವನ್ನು ಸವಿಯುತ್ತಿರುವಂತೆ ಜಾಹೀರಾತಿನಲ್ಲಿ ಬಿಂಬಿಸಲಾಗಿದೆ.

ಈ ಜಾಹೀರಾತನ್ನು ಕೂಡಲೇ ಹಿಂಪಡೆಯಬೇಕೆಂದು ಆಸ್ಟ್ರೇಲಿಯಾದಲ್ಲಿರುವ ಹಿಂದೂ ಸಮುದಾಯ ಒತ್ತಾಯಿಸಿದೆ. ಈ ಜಾಹೀರಾತು ಹಿಂದುಗಳ ಭಾವನೆಗೆ ಧಕ್ಕೆ ತಂದಿದೆ ಅಂತಾ ಆಕ್ರೋಶ ವ್ಯಕ್ತಪಡಿಸಿದೆ. ದಿ ಮೀಟ್ & ಲೈವ್ ಸ್ಟಾಕ್ ಆಸ್ಟ್ರೇಲಿಯಾದ ಜಾಹೀರಾತಿಗೆ ಸಾಮಾಜಿಕ ತಾಣಗಳಲ್ಲೂ ಖಂಡನೆ ವ್ಯಕ್ತವಾಗಿದೆ.

ಆದ್ರೆ ಜಾಹೀರಾತನ್ನು ಸಮರ್ಥಿಸಿಕೊಂಡಿರೋ ಕಂಪನಿ, ಕುರಿ ಮಾಂಸ ದಶಕಗಳಿಂದ್ಲೂ ಎಲ್ಲಾ ಸಮುದಾಯದವರನ್ನು ಒಟ್ಟುಗೂಡಿಸಿದೆ ಅಂತಾ ಹೇಳಿಕೊಂಡಿದೆ. ವಿವಿಧ ಧಾರ್ಮಿಕ ಆಚರಣೆಗಳ ವೈವಿದ್ಯತೆಯನ್ನು ಬಿಂಬಿಸಿದ್ದೇವೆ ಎಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...