alex Certify
ಕನ್ನಡ ದುನಿಯಾ       Mobile App
       

Kannada Duniya

ಅಭಿಮಾನಿಗಳ ಪ್ರೀತಿಗೆ ಪಿಜ್ಜಾ ಗಿಫ್ಟ್ ನೀಡಿದ ಹಿಲರಿ

ಅಮೆರಿಕಾದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಾಗೂ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ ಹಿಲರಿ ಕ್ಲಿಂಟನ್ ಪುಸ್ತಕ ವಾಟ್ ಹ್ಯಾಪನ್ಡ್ ಬಿಡುಗಡೆಯಾಗಿದೆ. ಪುಸ್ತಕ ಬಿಡುಗಡೆಗೂ ಮೊದಲ ದಿನವೇ ಹಿಲರಿ ಕ್ಲಿಂಟನ್ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಸೋಮವಾರ ರಾತ್ರಿ ಅಭಿಮಾನಿಗಳಿಗೆ ರುಚಿರುಚಿ ಪಿಜ್ಜಾ ಕಳುಹಿಸಿ ಅವ್ರ ಮೆಚ್ಚುಗೆ ಗಳಿಸಿದ್ದಾರೆ.

2016ರಲ್ಲಿ ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ್ದ ಅನುಭವಕ್ಕೆ ಹಿಲರಿ ಅಕ್ಷರ ರೂಪ ನೀಡಿದ್ದಾರೆ. ಮಂಗಳವಾರ ಪುಸ್ತಕ ಬಿಡುಗಡೆಯಾಗಿದೆ. ಹಿಲರಿ ಕ್ಲಿಂಟನ್  ಬುಕ್ ಖರೀದಿಗೆ ಸೋಮವಾರ ರಾತ್ರಿಯೇ ಬುಕ್ ಸ್ಟಾಲ್ ಮುಂದೆ ನೆರೆದಿದ್ದ ಜನರಿಗೆ ಹಿಲರಿ ಕ್ಲಿಂಟನ್ ಪಿಜ್ಜಾ ಗಿಫ್ಟ್ ನೀಡಿದ್ದಾರೆ. ನ್ಯೂಯಾರ್ಕ್ ಸಿಟಿ ಬರ್ನೆಸ್ ಮತ್ತು ನೋಬಲ್ ಯೂನಿಯನ್ ಸ್ಕ್ವೇರ್ ಬ್ರಾಂಚ್ ಮುಂದೆ ನೆರೆದಿದ್ದ ಸುಮಾರು 100ಕ್ಕೂ ಹೆಚ್ಚು ಅಭಿಮಾನಿಗಳಿಗೆ ಈ ಸರ್ಪ್ರೈಸ್ ಗಿಫ್ಟ್ ನೀಡಿದ್ದಾರೆ ಹಿಲರಿ.

ಹಿಲರಿ ಕ್ಲಿಂಟನ್ ಮೆಮೊರಿ ಪುಸ್ತಕ ಬಿಡುಗಡೆ ಜೊತೆಗೆ 69 ವರ್ಷದ ಹಿಲರಿ ಕ್ಲಿಂಟನ್ ಭೇಟಿಗೆ ಅವಕಾಶ ಸಿಗಬಹುದೆಂಬ ಕಾರಣಕ್ಕೆ ರಾತ್ರಿಯೇ ಅಭಿಮಾನಿಗಳು ಅಲ್ಲಿಗೆ ಬಂದಿದ್ದರು. ಹಿಲರಿ ಕ್ಲಿಂಟನ್ ಪಿಜ್ಜಾ ನೀಡ್ತಿದ್ದಂತೆ ಖುಷಿಯಾದ ಅಭಿಮಾನಿಗಳು ಟ್ವೀಟರ್ ನಲ್ಲಿ ಈ ಖುಷಿ ಹಂಚಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಹಿಲರಿ ಕ್ಲಿಂಟನ್ ಎಂಜಾಯ್. ನಾಳೆ ಭೇಟಿಯಾಗೋಣ ಎಂದು ಟ್ವಿಟ್ ಮಾಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...