alex Certify
ಕನ್ನಡ ದುನಿಯಾ       Mobile App
       

Kannada Duniya

ಸುಖಾಂತ್ಯವಾಯ್ತು ಈಜಿಪ್ಟ್ ವಿಮಾನ ಹೈಜಾಕ್ ಪ್ರಕರಣ

hijackerಮಂಗಳವಾರದಂದು ನಡೆದಿದ್ದ ಈಜಿಪ್ಟ್ ಏರ್ ವಿಮಾನ ಅಪಹರಣ ಪ್ರಕರಣ ಸುಖಾಂತ್ಯಗೊಂಡಿದೆ. ವಿಮಾನದಲ್ಲಿದ್ದ ಸಿಬ್ಬಂದಿ ಸೇರಿದಂತೆ ಎಲ್ಲ 62 ಮಂದಿ ಪ್ರಯಾಣಿಕರು ಸುರಕ್ಷಿತವಾಗಿ ಬಿಡುಗಡೆಗೊಂಡಿದ್ದು, ಅಪಹರಣಕಾರನನ್ನು ಬಂಧಿಸಲಾಗಿದೆ.

ಈ ಅಪಹರಣ ಪ್ರಕರಣ ಯಾವುದೇ ಭಯೋತ್ಪಾದಕ ಕೃತ್ಯಕ್ಕೆ ನಡೆದಿಲ್ಲವೆಂಬುದು ಸ್ಪಷ್ಟವಾಗಿದ್ದು, ಮಾನಸಿಕ ಅಸ್ವಸ್ಥತೆ ಹೊಂದಿದ್ದ ವ್ಯಕ್ತಿ, ವೈಯಕ್ತಿಕ ಕಾರಣಕ್ಕಾಗಿ ಈ ಕೃತ್ಯವೆಸಗಿದ್ದಾನೆ ಎಂದು ಹೇಳಲಾಗಿದೆ.

ತಾನು ಬೆಲ್ಟ್ ನಲ್ಲಿ ಬಾಂಬ್ ಹೊಂದಿರುವುದಾಗಿ ಹೇಳಿದ್ದ ಅಪಹರಣಕಾರ, ಯಾವುದೇ ಬಾಂಬ್ ಹೊಂದಿರಲಿಲ್ಲವೆಂಬ ಮಾಹಿತಿ ವಿಚಾರಣೆ ವೇಳೆ ಬಹಿರಂಗವಾಗಿದೆ. ಸತತ ಎಂಟು ಗಂಟೆಗಳ ಕಾಲ ವಿಶ್ವವನ್ನೇ ತಲ್ಲಣಗೊಳಿಸಿದ್ದ ಆರೋಪಿ, ಕೊನೆಗೂ ಬಂಧನಕ್ಕೊಳಗಾಗುವುದರ ಜೊತೆಗೆ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿ ಬಿಡುಗಡೆಗೊಂಡಿರುವುದು ಸಂತಸ ತಂದಿದೆ. ಆರೋಪಿ ಯಾವ ಉದ್ದೇಶಕ್ಕಾಗಿ ಈ ಕೃತ್ಯವೆಸಗಿದ್ದನೆಂಬುದು ವಿಚಾರಣೆ ಬಳಿಕವಷ್ಟೇ ಬಹಿರಂಗವಾಗಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...