alex Certify
ಕನ್ನಡ ದುನಿಯಾ       Mobile App
       

Kannada Duniya

ಶೀಘ್ರ ಶ್ರೀಮಂತನಾಗಲು ಇಂಥ ಕೆಲಸ ಮಾಡಿದ…!

ಚೀನಾದಲ್ಲೊಂದು ವಿಚಿತ್ರ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ರಸ್ತೆಯನ್ನೇ ಕಳ್ಳತನ ಮಾಡಿದ್ದಾನೆ. ಜಿಯಾಂಗ್ಸು ಪ್ರಾಂತ್ಯದ ವ್ಯಕ್ತಿಯೊಬ್ಬ ಒಂದೇ ರಾತ್ರಿ 800 ಮೀಟರ್ ಉದ್ದದ ಕಾಂಕ್ರಿಟ್ ರಸ್ತೆಯನ್ನು ಕಿತ್ತು ಕದ್ದೊಯ್ದಿದ್ದಾನೆ. ನಂತ್ರ ಕಾರ್ಖಾನೆಯೊಂದಕ್ಕೆ ಮಾರಾಟ ಮಾಡಿದ್ದಾನೆ.

ಸ್ಥಳೀಯ ಮಾಹಿತಿ ಪ್ರಕಾರ ಆರೋಪಿ ಶ್ರೀಮಂತನಾಗಲು ಬಯಸಿದ್ದನಂತೆ. ಕಾಂಕ್ರಿಟ್ ಮಾರಾಟ ಮಾಡಿ ಶ್ರೀಮಂತನಾಗಬಹುದು ಎಂದು ಪ್ಲಾನ್ ಮಾಡಿದ ವ್ಯಕ್ತಿ ರಸ್ತೆ ಅಗೆಯಲು ಶುರುಮಾಡಿದ್ದಾನೆ. 500 ಟನ್ ಕಾಂಕ್ರಿಟ್ ಸಂಗ್ರಹಿಸಿದ ಆರೋಪಿ ಸುಮಾರು 50 ಸಾವಿರ ರೂಪಾಯಿ ಗಳಿಸಿದ್ದಾನೆ.

ಜನವರಿ 24ರಂದು ಸ್ಥಳೀಯರಿಗೆ ರಸ್ತೆ ಕಿತ್ತಿರುವುದು ಗೊತ್ತಾಗಿದೆ. ಮಾಹಿತಿ ಇಲ್ಲದೆ ಅಧಿಕಾರಿಗಳು ರಸ್ತೆ ರಿಪೇರಿ ಶುರುಮಾಡಿದ್ದಾರೆಂದುಕೊಂಡಿದ್ದಾರೆ. ಆದ್ರೆ ಕೆಲ ಸಮಯದ ನಂತ್ರ ಅನುಮಾನ ವ್ಯಕ್ತವಾಗಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಚಾರಣೆ ನಡೆಸಿದ ಪೊಲೀಸರಿಗೆ ಆರೋಪಿ ಸಿಕ್ಕಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...