alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಹೈಸ್ಕೂಲ್ ಹುಡುಗಿಯ ಈ ಫೋಟೋ

poto-vrl

ಹೆಣ್ಣುಮಕ್ಕಳಿಗೆ ತಾಯ್ತನ ಎಂಬುದು ಚಿಕ್ಕ ವಯಸ್ಸಿನಲ್ಲೇ ಬಂದಿರುತ್ತೆ ಎಂಬುದಕ್ಕೆ ಈ ಪ್ರಕರಣ ಅತ್ಯುತ್ತಮ ಉದಾಹರಣೆಯಂತಿದೆ.

ಹೈಸ್ಕೂಲ್ ಹುಡುಗಿಯೊಬ್ಬಳು ಕ್ಲಾಸ್ ನಲ್ಲಿ ಮಗುವನ್ನು ಆರೈಕೆ ಮಾಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

17 ವರ್ಷ ವಯಸ್ಸಿನ ಸ್ಟೆಲ್ಲಾ ಪೆರಿಶ್ 3 ವರ್ಷದ ತನ್ನ ಸಹೋದರನನ್ನು ಇಡೀ ದಿನ ಆರೈಕೆ ಮಾಡಿದ್ದು, ಸ್ನಾಪ್ ಚಾಟ್ ನಲ್ಲಿ ಪೋಸ್ಟ್ ಆಗಿರುವ ಫೋಟೋ ಎಲ್ಲೆಡೆ ಹರಿದಾಡ್ತಿದೆ.

ಸ್ಟೆಲ್ಲಾಗೆ 3 ವರ್ಷದ ಸಹೋದರನಿದ್ದು, ಆತನನ್ನು ಡೇ ಕೇರ್ ಸೆಂಟರ್ ಗೆ ಕಳಿಸಲಾಗುತ್ತಿದೆ. ಆಕೆಯ ತಾಯಿ ತುರ್ತು ಕೆಲಸದ ನಿಮಿತ್ತ ಹೊರ ಹೋಗಬೇಕಿದ್ದ ಕಾರಣ, ಮಗುವನ್ನು ಕರೆದುಕೊಂಡು ಹೋಗಲು ಹೇಳಿದ್ದಾಳೆ.

ಕ್ಲಾಸ್ ತಪ್ಪಿಸಿಕೊಳ್ಳಲು ಮನಸೊಪ್ಪದ ಕಾರಣ, ಸ್ಟೆಲ್ಲಾ ಮಗುವನ್ನು ತರಗತಿಗೇ ಕರೆದುಕೊಂಡು ಹೋಗಿದ್ದಾಳೆ. ಅದು ಆಕೆಯ ತೋಳಿನಲ್ಲೇ ನಿದ್ದೆ ಮಾಡಿದೆ. ಟೀಚರ್ ಗಳು ಕೂಡ ಆಕೆ ಮಗುವನ್ನು ನೋಡಿಕೊಳ್ಳಲು ಅವಕಾಶ ನೀಡಿದ್ದಾರೆ. ಮಗು ಅತ್ತ ಸಂದರ್ಭದಲ್ಲಿ ಹೊರಗೆ ಕರೆದೊಯ್ದು ಸಂತೈಸಲು ಬಿಟ್ಟಿದ್ದಾರೆ.

ಸ್ಟೆಲ್ಲಾ ಮಗುವನ್ನು ಮನೆಗೆ ಕರೆದುಕೊಂಡು ಹೋಗಿರಬಹುದೆಂದು ಭಾವಿಸಿದ್ದ ತಾಯಿ ಈ ಫೋಟೋ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ತನಗಿಂತ 14 ವರ್ಷ ಚಿಕ್ಕವನನ್ನು ಸ್ಟೆಲ್ಲಾ ತರಗತಿಯಲ್ಲಿ ಸಂತೈಸಿರುವ ಮತ್ತು ಆಕೆಯ ತೋಳಲ್ಲಿ ಮಗು ಮಲಗಿರುವ ಫೋಟೋ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...