alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಧ ಮಾಲೀಕನ ಪ್ರಾಣ ಕಾಪಾಡಿದ ಶ್ವಾನ

dog

ಸಾಕು ಪ್ರಾಣಿಗಳು ನಮ್ಮ ಬದುಕಿನ ಅವಿಭಾಜ್ಯ ಅಂಗ. ಅದರಲ್ಲೂ ನಾಯಿಗಳಂತೂ ಮನುಷ್ಯರ ಪಾಲಿಗೆ ಆತ್ಮೀಯ ಸ್ನೇಹಿತರಿದ್ದಂತೆ. ಯಾಕಂದ್ರೆ ಅವು ತಮ್ಮ ಒಡೆಯನ ಬಗ್ಗೆ ಅಷ್ಟು ನಿಷ್ಠೆ ಹೊಂದಿರುತ್ತವೆ.

ಕೆಲವು ಸಿನಿಮಾಗಳಲ್ಲಿ ನೀವು ನೋಡಿರಬಹುದು ನಾಯಿಯೇ ಎಷ್ಟೋ ಬಾರಿ ತನ್ನ ಮಾಲೀಕನನ್ನು ಬಚಾವ್ ಮಾಡಿರೋದನ್ನ. ಕೇವಲ ಸಿನಿಮಾದಲ್ಲಿ ಮಾತ್ರವಲ್ಲ ನಿಜಜೀವನದಲ್ಲೂ ಅಂತಹ ಘಟನೆಯೊಂದು ನಡೆದಿದೆ. ಫಿಲಿಡೆಲ್ಫಿಯಾದಲ್ಲಿ ಗೋಲ್ಡನ್ ರಿಟ್ರೈವರ್ ಜಾತಿಗೆ ಸೇರಿದ ಯೋಲಾಂಡಾ ಎಂಬ ನಾಯಿ 60 ವರ್ಷ ವಯಸ್ಸಿನ ತನ್ನ ಮಾಲೀಕನನ್ನು ರಕ್ಷಿಸಿದೆ.

ಈ ನಾಯಿಯ ಮಾಲೀಕ ಅಂಧ, ಅವನಿಗೆ ಎರಡೂ ಕಣ್ಣುಗಳು ಕಾಣಿಸುವುದಿಲ್ಲ. ಇದ್ದಕ್ಕಿದ್ದಂತೆ ಮನೆಗೆ ಬೆಂಕಿ ಹೊತ್ತಿಕೊಂಡಿತ್ತು, ಆತ ಮನೆಯೊಳಗೇ ಸಿಕ್ಕಿಹಾಕಿಕೊಂಡಿದ್ದ. ಮನೆ ಹೊತ್ತಿ ಉರಿಯುತ್ತಿದೆ ಅನ್ನೋದು ಅವನಿಗೆ ಗೊತ್ತೇ ಇರಲಿಲ್ಲ. ಆಗ ಈ ನಾಯಿ ತಾನೇ ಖುದ್ದಾಗಿ 911ಕ್ಕೆ ಕರೆ ಮಾಡಿದೆ. ತುರ್ತು ಪರಿಸ್ಥಿತಿ ಬಗ್ಗೆ ವರದಿ ನೀಡಿದೆ. ಕೂಡಲೇ ಸ್ಥಳಕ್ಕೆ ಬಂದ ರಕ್ಷಣಾ ಸಿಬ್ಬಂದಿ ಅಂಧ ಮಾಲೀಕನನ್ನು ಮನೆಯಿಂದ ಹೊರಕ್ಕೆ ಕರೆತಂದಿದ್ದಾರೆ.

2013ರಲ್ಲಿ ಕೂಡ ಯೋಲಾಂಡಾ ಮನೆಗೆ ನುಗ್ಗಿದ್ದ ದರೋಡೆಕೋರರನ್ನು ಓಡಿಸಿತ್ತು. ಕಳೆದ ವರ್ಷ ತನ್ನ ಒಡೆಯ ಪ್ರಜ್ಞೆತಪ್ಪಿ ಬಿದ್ದಿದ್ದು ನೋಡಿ ಗಾಬರಿಯಾದ ಶ್ವಾನ 911ಕ್ಕೆ ಕರೆ ಮಾಡಿತ್ತು. ಇದೀಗ ಮಾಲೀಕನನ್ನು ರಕ್ಷಿಸಿರುವ ನಾಯಿಗೆ ಇಷ್ಟವಾದ ತಿನಿಸು ಮತ್ತು ಆಟಿಗೆಗಳನ್ನು ಕೊಟ್ಟು ಸನ್ಮಾನಿಸಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...