alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಸಂಚಾರಿ ಪೇದೆಯ ಈ ಸಾಹಸ

cop-saves-kid_650x400_51498123886

ಚೀನಾದಲ್ಲಿ ಮಗುವನ್ನು ರಕ್ಷಿಸಲು ಸಂಚಾರಿ ಪೊಲೀಸ್ ಪೇದೆಯೊಬ್ಬ ತನ್ನ ಪ್ರಾಣವನ್ನೂ ಲೆಕ್ಕಿಸದೇ ಮುನ್ನುಗ್ಗಿರೋ ವಿಡಿಯೋ ವೈರಲ್ ಆಗಿದೆ. ತಾಯಿ ಮತ್ತು ಮಗು ಸ್ಕೂಟರ್ ನಲ್ಲಿ ಬಂದಿದ್ರು. ಮಗು ಗಾಡಿ ಇಳಿದಿದೆ, ಅಮ್ಮ ಸ್ಕೂಟರ್ ಪಾರ್ಕ್ ಮಾಡಿ ಬರುವಷ್ಟರಲ್ಲಿ ರಸ್ತೆ ದಾಟಲು ಆರಂಭಿಸಿದೆ.

ರಸ್ತೆಯಲ್ಲಿ ವಾಹನಗಳೆಲ್ಲ ವೇಗವಾಗಿ ಸಂಚರಿಸ್ತಾ ಇದ್ವು. ಚಿಕ್ಕ ಮಗುವಾಗಿದ್ರಿಂದ ಅದಕ್ಕೆ ಅಪಾಯದ ಅರಿವೇ ಇರಲಿಲ್ಲ. ವೇಗವಾಗಿ ಬರ್ತಾ ಇದ್ದ ಕಾರಿನೆದುರು ಮಗು ಬಂದುಬಿಟ್ಟಿದೆ. ಪರಿಸ್ಥಿತಿ ಅರ್ಥಮಾಡಿಕೊಂಡ ಸಂಚಾರಿ ಪೇದೆ ಕೂಡಲೇ ಓಡಿ ಬಂದಿದ್ದಾನೆ.

ಶರವೇಗದಲ್ಲಿ ಮುನ್ನುಗ್ಗಿ ಬಂದಿದ್ದ ಕಾರಿನ ಸಮೀಪದಿಂದ್ಲೇ ಹಾದು ಬಂದು ಮಗುವನ್ನು ರಕ್ಷಿಸಿದ್ದಾನೆ. ಪೊಲೀಸ್ ಪೇದೆ ತಕ್ಷಣಕ್ಕೆ ಬಾರದೇ ಇದ್ದಿದ್ರೆ ಮಗುವಿನ ಪ್ರಾಣ ಉಳಿಯುವುದೇ ಅನುಮಾನವಾಗಿತ್ತು. ಈ ವಿಡಿಯೋವನ್ನು ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಲಾಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...