alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವಿಡಿಯೋ ನೋಡಿದ್ರೆ ಬಿದ್ದು ಬಿದ್ದು ನಗ್ತೀರಿ..!

Russian-soldier-doesnt-realise-kidnap-is-part-of-a-filmಇಂತಹ ಘಟನೆಗಳು ಸಿನಿಮಾದಲ್ಲಿ ಮಾತ್ರ ನಡೆಯುತ್ತವೆ ಅಂತ ನೀವಂದುಕೊಂಡರೆ ಅದು ತಪ್ಪು. ನಿಜ ಜೀವನದಲ್ಲೂ ಇದು ಘಟಿಸಿದ ವೇಳೆ ಇದೇ ರೀತಿಯ ದೃಶ್ಯ ಸಿನಿಮಾವೊಂದರಲ್ಲಿ ಇತ್ತಲ್ವಾ ಎಂದು ನಿಮಗನಿಸುತ್ತದೆ.

ಹೌದು ಅಂತದೊಂದು ಘಟನೆ ರಷ್ಯಾದಲ್ಲಿ ನಡೆದಿದೆ. ದುಷ್ಕರ್ಮಿಯೊಬ್ಬ ಯುವತಿಯೊಬ್ಬಳ ತಲೆಗೆ ಗನ್ ಹಿಡಿದು ಆಕೆಯನ್ನು ಅಪಹರಿಸಲು ಯತ್ನಿಸಿದ್ದಾನೆ. ಆಕೆಯನ್ನು ರಕ್ಷಿಸಲು ಬಂದ ಇಬ್ಬರು ಪೊಲೀಸರು ಏನೂ ಮಾಡಲಾಗದೆ ಅಸಹಾಯಕತೆಯಿಂದ ಈ ದೃಶ್ಯವನ್ನು ವೀಕ್ಷಿಸುತ್ತಿದ್ದಾರೆ. ಜೊತೆಗೆ ಗನ್ ಕೆಳಗೆ ಹಾಕದಿದ್ದರೆ ಯುವತಿಯನ್ನು ಕೊಲೆ ಮಾಡುವುದಾಗಿ ದುಷ್ಕರ್ಮಿ ಬೆದರಿಕೆ ಹಾಕಿದ ಕಾರಣ ಅನಿವಾರ್ಯವಾಗಿ ತಮ್ಮ ಗನ್ ಅನ್ನು ಕೆಳಗೆ ಇಟ್ಟಿದ್ದಾರೆ.

ಇದೇ ಸಮಯದಲ್ಲಿ ಹೀರೋನಂತೆ ಬಂದ ರಷ್ಯಾದ ಸೈನಿಕ ದುಷ್ಕರ್ಮಿಯ ಮೇಲೆ ಮುಗಿ ಬಿದ್ದಿದ್ದಾನೆ. ಅಷ್ಟೇ ಅಲ್ಲ ಆತನನ್ನು ಕೆಳ ಬೀಳಿಸಿ ಯುವತಿಯನ್ನು ರಕ್ಷಿಸಿದ್ದಾನೆ. ಕೆಳಗೆ ಬಿದ್ದವನಿಗೆ ಇನ್ನೇನು ಮತ್ತಷ್ಟು ಗೂಸಾ ಕೊಡಲು ಮುಂದಾಗುವಷ್ಟರಲ್ಲಿ ಪೊಲೀಸರ ವೇಷದಲ್ಲಿದ್ದವರು ಆತನನ್ನು ತಡೆದಿದ್ದಾರೆ. ಅಷ್ಟಕ್ಕೂ ಅಲ್ಲಿ ನಡೆಯುತ್ತಿದ್ದುದು ಸಿನಿಮಾ ಶೂಟಿಂಗ್. ಇದನ್ನರಿಯದ ಸೈನಿಕ, ಖಳ ನಾಯಕನ ಪಾತ್ರ ವಹಿಸಿದ್ದವನ ಮೇಲೆ ಮುಗಿಬಿದ್ದು ಕೆಳಗೆ ಬೀಳಿಸಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದ್ದು, ‘ಕನ್ನಡ ದುನಿಯಾ’ ಓದುಗರೂ ವೀಕ್ಷಿಸಿ ಎಂಜಾಯ್ ಮಾಡಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...