alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ಲಾಸ್ಟಿಕ್ ಕಪ್ ನಲ್ಲಿ ಕುಡಿಯಬೇಡಿ ಶಾಂಪೇನ್…!

ಕ್ರಿಸ್ಮಸ್ ಹತ್ತಿರ ಬರ್ತಿದೆ. ಎಲ್ಲಾ ಕಡೆ ಕ್ರಿಸ್ಮಸ್ ಸೆಲೆಬ್ರೇಶನ್, ಟ್ರೀ, ಗಿಫ್ಟ್, ಪಾರ್ಟಿ ಹಾಗೂ ಶಾಂಪೇನ್ ಗಳದ್ದೇ ಅಬ್ಬರ. ಆದ್ರೆ ಶಾಂಪೇನ್ ಕುಡಿಯುವ ಮುನ್ನ ಒಂದು ವಿಚಾರ ನಿಮ್ಮ ಗಮನದಲ್ಲಿರಲಿ. ಶಾಂಪೇನ್ ಅನ್ನು ಪ್ಲಾಸ್ಟಿಕ್ ಕಪ್ ನಲ್ಲಿ ಕುಡಿಯಬೇಡಿ, ಗಾಜಿನ ಲೋಟವನ್ನೇ ಬಳಸಿ.

ಯಾಕಂದ್ರೆ ಗಾಜಿನ ಲೋಟ ಬಿಟ್ಟು ಬೇರೆ ಕಪ್ ಗಳಲ್ಲಿ ವೈನ್ ಅಥವಾ ಶಾಂಪೇನ್ ಅನ್ನು ಹಾಕಿದಾಗ ಅದರ ಟೇಸ್ಟ್ ಸಂಪೂರ್ಣವಾಗಿ ಕೆಟ್ಟು ಹೋಗುತ್ತದೆ ಅಂತಾ ತಜ್ಞರು ಹೇಳಿದ್ದಾರೆ. ಈ ಬಗ್ಗೆ ಟೆಕ್ಸಾಸ್ ಯೂನಿವರ್ಸಿಟಿಯಲ್ಲಿ ಸಂಶೋಧನೆ ಕೂಡ ಮಾಡಲಾಗಿದೆ.

ವೈನ್ ಅಥವಾ ಶಾಂಪೇನ್ ಅನ್ನು ಲೋಟಕ್ಕೆ ಸುರಿದಾಗ ಏಳುವ ಗುಳ್ಳೆಗಳು ಅದರ ರುಚಿಯನ್ನು ಬದಲಾಯಿಸುತ್ತವೆ ಎನ್ನುತ್ತಾರೆ ವಿಜ್ಞಾನಿಗಳು. ನಾವು ಯಾವ ರೀತಿಯ ಲೋಟ ಅಥವಾ ಪಾತ್ರೆಯಲ್ಲಿ ಶಾಂಪೇನ್ ಸುರಿದಿದ್ದೇವೆ ಎಂಬುದರ ಮೇಲೆ ಗುಳ್ಳೆಗಳ ಗಾತ್ರ, ಸಂಖ್ಯೆ ನಿರ್ಧಾರವಾಗುತ್ತದೆ.

ನೀವು ಪ್ಲಾಸ್ಟಿಕ್ ಕಪ್ ಗೆ ವೈನ್ ಸುರಿದಾಗ ಗುಳ್ಳೆಗಳು ಅಂಚಿಗೆ ಅಂಟಿಕೊಂಡು ದೊಡ್ಡ ದೊಡ್ಡ ಬಬಲ್ಸ್ ಆಗಿ ಮಾರ್ಪಡುತ್ತವೆ. ಆ ಗುಳ್ಳೆಗಳು ವೈನ್ ರುಚಿಯನ್ನು ಕೆಡಿಸಿಬಿಡುತ್ತವೆ. ಹಾಗಾಗಿ ಗಾಜಿನ ಲೋಟಕ್ಕೆ ಹಾಕಿಕೊಂಡು ವೈನ್, ಶಾಂಪೇನ್, ಬಿಯರ್ ಸವಿಯಬೇಕು ಅನ್ನೋದು ವಿಜ್ಞಾನಿಗಳ ಸಲಹೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...