alex Certify
ಕನ್ನಡ ದುನಿಯಾ       Mobile App
       

Kannada Duniya

ಬಹಿರಂಗವಾಯ್ತು ಬ್ರಿಟನ್ ರಾಣಿ ಬ್ಯಾಗ್ ‘ರಹಸ್ಯ’

ಲಂಡನ್ ರಾಣಿ ಎಲಿಜಬೆತ್ ಯಾವುದೇ ಕಾರ್ಯಕ್ರಮಗಳಿಗೆ ಬಂದ್ರೂ ಸಖತ್ ಕಲರ್ ಫುಲ್ ಆಗಿ ಕಾಣ್ತಾರೆ. ಸುಂದರ ಡ್ರೆಸ್, ಅದಕ್ಕೆ ಒಪ್ಪುವ ಒಡವೆ, ಜೊತೆಗೊಂದು ಹ್ಯಾಟ್ ಹೀಗೆ ಸರ್ವಾಲಂಕೃತರಾಗಿ ಆಗಮಿಸ್ತಾರೆ.

ಆದ್ರೆ ಅಧಿಕೃತ ಕಾರ್ಯಕ್ರಮಗಳಿಗೆಲ್ಲ ರಾಣಿ ಸುಮಾರು 60 ವರ್ಷಗಳಿಂದ ಒಂದೇ ತೆರನಾದ ಹ್ಯಾಂಡ್ ಬ್ಯಾಗ್ ತರ್ತಿದ್ದಾರೆ. ಬ್ರಿಟಿಷ್ ಬ್ರಾಂಡ್ Launar ವಿನ್ಯಾಸಗೊಳಿಸಿರೋ ಈ ಬ್ರಾಂಡ್ ರಾಣಿಯ ಟ್ರೇಡ್ ಮಾರ್ಕ್ ನಂತಾಗಿದೆ.

ಈ ಹ್ಯಾಂಡ್ ಬ್ಯಾಗ್ ಇಲ್ಲದೇ ಎಲಿಜಬೆತ್ ಹೊರಗೆ ಹೊರಡೋದೇ ಇಲ್ವಂತೆ. ಸೋಹೋನಲ್ಲಿ 1941ರಲ್ಲಿ ಸ್ಯಾಮ್ ಲೌನರ್ ಆರಂಭಿಸಿದ ಬ್ರಾಂಡ್ ಇದು. ಬರಬರುತ್ತ Launer ಬ್ರಾಂಡ್ ಬ್ರಿಟನ್ ನಲ್ಲಿ ಬಹು ಜನಪ್ರಿಯವಾಯ್ತು.

1950ರ ದಶಕದಲ್ಲಿ ಎಲಿಜಬೆತ್ ರ ತಾಯಿ Launer ಬ್ರಾಂಡ್ ನ ಬ್ಯಾಗ್ ಒಂದನ್ನು ಮಗಳಿಗಾಗಿ ತಂದುಕೊಟ್ಟಿದ್ದರಂತೆ. ಬ್ಯಾಗ್ ನ ವಿನ್ಯಾಸ, ಸೈಜ್, ಕ್ವಾಲಿಟಿ ಎಲ್ಲವೂ ರಾಣಿಗೆ ಇಷ್ಟವಾಗಿತ್ತು. ಹಾಗಾಗಿ ಈಗಲೂ ಅದೇ ಬ್ಯಾಗ್ ಅನ್ನು ಬಳಸುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...