alex Certify
ಕನ್ನಡ ದುನಿಯಾ       Mobile App
       

Kannada Duniya

40 ವರ್ಷದ ಹಿಂದಿನ ಕಂಪ್ಯೂಟರ್ ಗೆ 2 ಕೋಟಿ ರೂಪಾಯಿ ಬೆಲೆ…?

ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ಆಪಲ್ ಕಂಪನಿ, ತನ್ನ ಮೊದಲ ಕಂಪ್ಯೂಟರ್ ಹರಾಜು ಮಾಡಲು ಮುಂದಾಗಿದೆ. 1976 ರಲ್ಲಿ ಕಂಪನಿ ಸಂಸ್ಥಾಪಕ ಸ್ಟೀವ್ ಜಾಬ್ಸ್ ಮತ್ತು ಸ್ಟೀವ್ ವೊಜ್ನಿಯಾಕ್ ತಯಾರಿಸಿದ್ದ ಆಪಲ್-1 ಹರಾಜಿಗೆ ಇಟ್ಟಿದೆ. ಈ ಕಂಪ್ಯೂಟರ್ ಗೆ ಸಂಸ್ಥೆ 2 ಕೋಟಿ ರೂಪಾಯಿಯ ಮುಖಬೆಲೆಯನ್ನು ನಿಗದಿ ಮಾಡಿದೆ.

1976 ರಂದು ಈ ಕಂಪ್ಯೂಟರ್ ರಚಿಸಲು ಸುಮಾರು 666.66 ಡಾಲರ್ ಖರ್ಚು ಮಾಡಲಾಗಿತ್ತು. 40 ವರ್ಷಗಳ ಹಿಂದೆ ನಿರ್ಮಿಸಲಾದ ಕಂಪ್ಯೂಟರ್ ಈಗಲೂ ಕಾರ್ಯ ನಿರ್ವಹಿಸುತ್ತಿರೋದು ವಿಶೇಷ. ಆಪಲ್ ಸಂಸ್ಥೆಯ ಮೊದಲ ಕಂಪ್ಯೂಟರ್ ನಲ್ಲಿ ಮದರ್ ಬೋರ್ಡ್ ಇದ್ದು, ಟಿವಿಗೆ ಕನೆಕ್ಟ್ ಮಾಡಲಾಗಿದೆ. ಅಲ್ಲದೆ ಇದಕ್ಕೆ ಕೀ-ಬೋರ್ಡ್ ಸಹ ಸೇರಿಸಿದ್ದಾರೆ.

ಕಂಪ್ಯೂಟರ್ ತಯಾರಿಸಲು ಸ್ಟೀವ್ ಜಾಬ್ಸ್ ಮತ್ತು ಸ್ಟೀವ್ ವೊಜ್ನಿಯಾಕ್ ಬಳಿ ಇದ್ದ ಹಣ ಸಾಕಾಗುತ್ತಿರಲಿಲ್ಲ. ಸ್ಟೀವ್ ಜಾಬ್ಸ್ ತಮ್ಮ ವಾಹನ ಹಾಗೂ ಸ್ಟೀವ್ ವೊಜ್ನಿಯಾಕ್ ತಮ್ಮ ಬಳಿ ಇದ್ದ HP-65 ಕ್ಯಾಲ್ಕುಲೇಟರ್ ಮಾರಾಟ ಮಾಡಿ, ಈ ಕಂಪ್ಯೂಟರ್ ತಯಾರಿಸಿದ್ದರು.

ವಿಶ್ವದಲ್ಲಿ ತನ್ನ ಶ್ರೇಷ್ಠ ಗುಣಮಟ್ಟದ ಮೊಬೈಲ್, ಕಂಪ್ಯುಟರ್ ಹಾಗೂ ಟ್ಯಾಬ್ ಗಳಿಂದಲೇ ಹೆಸರು ಮಾಡಿರುವ ಆಪಲ್ ಸಂಸ್ಥೆಯ ಮೊದಲ ಉತ್ಪನವನ್ನು ಯಾರು ಪಡೆಯಲಿದ್ದಾರೆ ಎಂಬ ಕುತೂಹಲ ಈಗ ಮನೆ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...