alex Certify
ಕನ್ನಡ ದುನಿಯಾ       Mobile App
       

Kannada Duniya

3 ತಿಂಗಳ ಮಗುವನ್ನು ಬಿಟ್ಟು ಒಂಟಿಯಾಗಿ ಹಾಲಿಡೇಗೆ ತೆರಳಿದ್ಲು ಮಹಿಳೆ

ಜೋ ಪಿಯಾಜ್ಜಾ ಎಂಬ ಮಹಿಳೆ ಒಬ್ಬಂಟಿಯಾಗಿ ಹಾಲಿಡೇಗೆ ತೆರಳಿದ್ಲು. ವಿಶೇಷ ಏನ್ ಗೊತ್ತಾ? ಆ ಸಮಯದಲ್ಲಿ ಅವಳ ಹೆಣ್ಣು ಮಗುವಿಗೆ ಇನ್ನೂ 3 ತಿಂಗಳು. ಆ ಹಸುಗೂಸನ್ನು ಮನೆಯಲ್ಲೇ ಬಿಟ್ಟು ಜೋ ರಜಾ ಕಳೆಯಲು ತೆರಳಿದ್ಲು. ಇದರ ಹಿಂದೆ ಬೇರೊಂದು ಉದ್ದೇಶವಿದೆ.

ಜೋ ಪಿಯಾಜ್ಜಾ ಒಬ್ಬ ಲೇಖಕಿ. ಕಾದಂಬರಿಯೊಂದನ್ನು ಬರೆಯುತ್ತಿದ್ಲು. ಮಗುವಿನ ಲಾಲನೆ ಪಾಲನೆಯಲ್ಲಿ ಸಮಯ ಸಿಗುತ್ತಿರಲಿಲ್ಲ, ಸಿಕ್ಕರೂ ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತಿರಲಿಲ್ಲ. ಹಲವು ದಿನಗಳಿಂದ ಸರಿಯಾಗಿ ನಿದ್ದೆ ಕೂಡ ಇಲ್ಲದೇ ಮನಸ್ಸು ಜಡ್ಡುಗಟ್ಟಿದಂತಾಗಿತ್ತು.

ಆ ಕಾದಂಬರಿಯನ್ನು ಪೂರ್ತಿಯಾಗಿ ಬರೆದು ಮುಗಿಸಬೇಕು ಅಂದ್ರೆ ಜೋ ಪಿಯಾಜ್ಜಾಗೆ ಪ್ರಶಾಂತವಾದ ವಾತಾವರಣ, ಮನಸ್ಸಿಗೆ ನಿರಾಳತೆ ಬೇಕಾಗಿತ್ತು. ಹಾಗಾಗಿ ಗಟ್ಟಿ ನಿರ್ಧಾರ ಮಾಡಿದ ಯುವ ಲೇಖಕಿ, 3 ತಿಂಗಳ ಮಗಳನ್ನು ಪತಿಯ ಸುಪರ್ದಿಗೆ ಬಿಟ್ಟು ನಾಲ್ಕಾರು ದಿನ ಹಾಲಿಡೇಗೆ ಹೋಗಿದ್ದಾಳೆ.

ಅಲ್ಲಿ ಒಂದು ದಿನ ಚೆನ್ನಾಗಿ ನಿದ್ದೆ ಮಾಡಿ ವಿಶ್ರಾಂತಿ ತೆಗೆದುಕೊಂಡು, ನಂತರ ಹೊಸ ಉತ್ಸಾಹದಿಂದ ಬರವಣಿಗೆ ಶುರು ಮಾಡಿದ್ದಾಳೆ. ಈ ರೀತಿ ಮಾಡುವುದು ತನಗೆ ಅತ್ಯಂತ ಅನಿವಾರ್ಯವಾಗಿತ್ತು ಅಂತಾ ಆಕೆ ಹೇಳಿಕೊಂಡಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...