alex Certify
ಕನ್ನಡ ದುನಿಯಾ       Mobile App
       

Kannada Duniya

ಪೈಜಾಮ ತೊಟ್ಟು ಆಫೀಸ್ ಗೆ ಬಂದ ಆಮೆಜಾನ್ ಸಿಇಓ

ಆಮೆಜಾನ್ ಸಂಸ್ಥೆಯ ಸಿಇಓ ಜೆಫ್ ಬೆಝೋಸ್ ಇತ್ತೀಚೆಗಷ್ಟೇ ವಿಶಿಷ್ಟ ವೇಷಭೂಷಣದೊಂದಿಗೆ ಬೋರ್ಡ್ ಮೀಟಿಂಗ್ ನಲ್ಲಿ ಕಾಣಿಸಿಕೊಂಡರು. ರಾತ್ರಿಯ ವೇಳೆ ಧರಿಸುವ ಪೈಜಾಮ, ಕಡು ನೀಲಿ ಬಣ್ಣದ ನೈಟ್ ವೇರ್, ಬೆಡ್ ರೂಮ್ ನಲ್ಲಿ ಧರಿಸುವ ಚಪ್ಪಲಿಯೊಂದಿಗೆ ಕಚೇರಿಯ ಮೀಟಿಂಗ್ ನಲ್ಲಿ ಕಾಣಿಸಿಕೊಂಡರು. ಅಷ್ಟೇ ಅಲ್ಲ ತಮ್ಮ ಈ ಸಿಂಪ್ಲಿಸಿಟಿಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಕೂಡ ಪೋಸ್ಟ್ ಮಾಡಿದ್ದರು.

ತಾವು ಏಕೆ ಹೀಗೆ ಬೋರ್ಡ್ ಮೀಟಿಂಗ್ ನಲ್ಲಿ ಕಾಣಿಸಿಕೊಂಡೆ ಅನ್ನೋದಕ್ಕೆ ಜೆಫ್ ಕಾರಣವನ್ನು ಈ ಫೋಟೋದೊಂದಿಗೆ ಷೇರ್ ಮಾಡಿದ್ದರು. ಮಕ್ಕಳ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜೆಫ್ ಹೀಗೆ ಬೋರ್ಡ್ ಮೀಟಿಂಗ್ ನಲ್ಲಿ ಕಾಣಿಸಿಕೊಂಡಿದ್ದರಂತೆ. ಸೆಪ್ಟೆಂಬರ್ ತಿಂಗಳು ಮಕ್ಕಳ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಮಾಸವಾಗಿದೆ. 4 ರಿಂದ 14 ವರ್ಷದ ಒಳಗಿನ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್ ಬಗ್ಗೆ ಆಮೆಜಾನ್ ಸಾಮಾಜಿಕ ಕಾರ್ಯಕ್ರಮವೊಂದನ್ನು ನಡೆಸುತ್ತಿದೆ.

ಪೈಜಾಮಾ ಅಭಿಯಾನವನ್ನು ಸಂಘಟಿಸಿರುವ ಆಮೆಜಾನ್, ಕ್ಯಾನ್ಸರ್ ನಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸಾ ವೆಚ್ಚ ಭರಿಸುತ್ತಿದೆ. ಈ ಬಗ್ಗೆ ಜಗತ್ತಿನ ಜನರು ಕೂಡ ತಮ್ಮ ಕೈಲಾದ ಸಹಾಯವನ್ನು ಮಕ್ಕಳಿಗೆ ಮಾಡುವ ಸಲುವಾಗಿ ಪೈಜಾಮಾ ಅಭಿಯಾನಕ್ಕೆ ಆಮೆಜಾನ್ ಸಿಇಓ ಚಾಲನೆ ನೀಡಿದ್ದಾರೆ. ವಿಶ್ವದೆಲ್ಲೆಡೆ ಇರುವ ಆಮೆಜಾನ್ ಸಂಸ್ಥೆಯ ಉದ್ಯೋಗಿಗಳು ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಈ ಅಭಿಯಾನದ ಮೂಲಕ ಸಂಗ್ರಹವಾಗುವ ಹಣವನ್ನು ಅಮೆರಿಕ ಚೈಲ್ಡ್ ವುಡ್ ಕ್ಯಾನ್ಸರ್ ಆರ್ಗನೈಷೇಷನ್ ಗೆ ಕೊಡಲು ನಿರ್ಧರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...