alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ನಲ್ಲಿ ಡಿಲೀಟ್ ಆದ ಮೆಸೇಜ್ ಓದುವುದು ಹೇಗೆ…?

ಕೆಲ ತಿಂಗಳ ಹಿಂದಷ್ಟೇ ವಾಟ್ಸಾಪ್ ‘ಡಿಲೀಟ್ ಫಾರ್ ಎವೆರಿ ಒನ್’ ಆಯ್ಕೆಯನ್ನು ಪರಿಚಯಿಸಿತ್ತು. ಮೆಸೇಜ್ ಸ್ವೀಕರಿಸುವವರ ಸ್ಮಾರ್ಟ್‌ಫೋನ್‌ಗೆ ಡೆಲಿವರಿ ಆದ ಮೆಸೇಜ್ ಅನ್ನು ಡಿಲೀಟ್ ಮಾಡಲು ಕಳುಹಿಸಿದವರಿಗೆ ಅವಕಾಶ ಕಲ್ಪಿಸುತ್ತದೆ ಈ ಫೀಚರ್. ಆದರೆ ಹೀಗೆ ಡಿಲೀಟ್ ಆದ ಮೆಸೇಜ್‌ಗಳನ್ನೂ ಮತ್ತೆ ಓದಬಹುದು ಎಂಬುದು ನಿಮಗೆ ಗೊತ್ತಾ? ಅದಕ್ಕಾಗಿಯೇ ಕೆಲ ಆಪ್‌ ಸಿದ್ಧವಾಗಿವೆ.

ಅಂತಹ ಒಂದು ಆಪ್ ‘ನೋಟಿಫಿಕೇಶನ್ ಹಿಸ್ಟರಿ’. ಈ ಆಪ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯ ಇದ್ದು, ಇದು ನಿಮ್ಮ ಹೋಮ್ ಸ್ಕ್ರೀನ್‌ನಲ್ಲಿ ಶಾರ್ಟ್ ಕಟ್ ಕ್ರಿಯೇಟ್ ಮಾಡುತ್ತದೆ. ಆಂಡ್ರಾಯ್ಡ್ ಸಿಸ್ಟಮ್‌ನಲ್ಲಿ ನೋಟಿಫಿಕೇಶನ್ ರಿಜಿಸ್ಟ್ರಿಯನ್ನು ತೆರೆಯಲು ಐಕಾನ್ ಮೇಲೆ ನೀವು ಟ್ಯಾಪ್ ಮಾಡಬಹುದು.

ಇನ್ನೊಂದು ಆಪ್, ನೋವಾ ಲಾಂಚರ್‌ ಕೂಡಾ ಇದೇ ರೀತಿ ಕಾರ್ಯಾಚರಿಸುತ್ತದೆ. ಇದರಲ್ಲಿ ನೀವು ಮಾಡಬೇಕಾಗಿರುವುದು ಇಷ್ಟೇ, ಹೋಮ್ ಸ್ಕ್ರೀನ್ ಮೇಲೆ ಖಾಲಿ ಸ್ಥಳದಲ್ಲಿ ದೀರ್ಘವಾಗಿ ಪ್ರೆಸ್ ಮಾಡಬೇಕು.

‘ವಿಜೆಟ್ಸ್’ ಮೇಲೆ ಟ್ಯಾಪ್ ಮಾಡಿ. ನಂತರ ‘ಆಕ್ಟಿವಿಟೀಸ್’ ಮೇಲೆ ದೀರ್ಘ ಪ್ರೆಸ್ ಮಾಡಿ ಮತ್ತು ನೀವು ಹೋಮ್ ಸ್ಕ್ರೀನ್‌ಗೆ ಜಂಪ್ ಆದಾಗ ಡ್ರಾಪ್ ಮಾಡಿ. ಒಂದು ಪಟ್ಟಿ ಕಾಣಿಸಿಕೊಳ್ಳುತ್ತದೆ –‘ಸೆಟಿಂಗ್ಸ್’ ಕ್ಲಿಕ್ ಮಾಡಿ. ಕೊನೆಯದಾಗಿ, ಹೋಮ್ ಸ್ಕ್ರೀನ್ ಮೇಲೆ ಶಾರ್ಟ್ ಕಟ್ ಕ್ರಿಯೇಟ್ ಮಾಡಲು, ಸಬ್ ಲಿಸ್ಟ್ ನಲ್ಲಿ, ‘ನೋಟಿಫಿಕೇಶನ್ ಲಾಗ್’ ಟ್ಯಾಪ್ ಮಾಡಿ.

ನೀವು ಆಂಡ್ರಾಯ್ಡ್ ನೋಟಿಫಿಕೇಶನ್ ಹಿಸ್ಟರಿಗೆ ಪ್ರವೇಶಿಸಬಹುದು ಮತ್ತು ವಾಟ್ಸಾಪ್ ಡಿಲೀಟ್ ಆದ ಮೆಸೇಜ್‌ಗಳನ್ನು ಹುಡುಕಿ.

ವಾಟ್ಸಾಪ್ ನಲ್ಲಿನ ಸಂದೇಶಗಳನ್ನು ಹ್ಯಾಕ್ ಮಾಡಿ ಅದನ್ನು ಬದಲಾಯಿಸಿ ಸುಳ್ಳು ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ ಎಂದು ಇತ್ತೀಚೆಗೆ ಇಸ್ರೇಲ್ ಸೈಬರ್ ಭದ್ರತಾ ಸಂಸ್ಥೆಯಲ್ಲಿನ ಸಂಶೋಧಕರು ಹೇಳಿದ್ದರು. ಇದೀಗ ಡಿಲೀಟ್‌ ಮಾಡಿದ ಸಂದೇಶಗಳನ್ನೂ ಓದುವಂತಹ ಆಪ್‌ಗಳು ಬಂದಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...