alex Certify
ಕನ್ನಡ ದುನಿಯಾ       Mobile App
       

Kannada Duniya

ಯೋಗ, ವ್ಯಾಯಾಮದಿಂದ 111 ವರ್ಷವಾದ್ರೂ ವೃದ್ಧ ಫಿಟ್

ವಯಸ್ಸು ಆಗ್ತಾ ಇದ್ದಂತೆ, ಆರೋಗ್ಯದ ಸಮಸ್ಯೆ ಹೆಚ್ಚಾಗುತ್ತದೆ. ಆರೋಗ್ಯಕ್ಕಾಗಿ ದಿನಂಪ್ರತಿ ವೃದ್ಧರು ಆಸ್ಪತ್ರೆಯ ಮೆಟ್ಟಿಲುಗಳನ್ನು ಏರುತ್ತಾರೆ. ಆದ್ರೆ, ಇಲ್ಲೊಬ್ಬರು ತಮ್ಮ ವಯಸ್ಸಿಗೆ ಮೀರಿದ ವ್ಯಾಯಾಮ, ಯೋಗಾಸನ ಮಾಡಿ ಸಧೃಡ ಆರೋಗ್ಯ ಹೊಂದಿದ್ದಾರೆ.

ಹಾಂಕಾಂಗ್ ಮೂಲದ ಅಮೆರಿಕ ನಿವಾಸಿ ಹೆನ್ರಿ ತ್ಸೆಂಗಾ ತಮ್ಮ ಶಿಸ್ತಿನ ಜೀವನದ ಮೂಲಕ ಉತ್ತಮ ಆರೋಗ್ಯ ಹೊಂದಿದ್ದಾರೆ. 111 ವರ್ಷದ ತ್ಸೆಂಗಾ ತಮ್ಮ ವಯಸ್ಸಿಗೆ ಅಸಾಧ್ಯವಾದ ಆಸನ ಹಾಗೂ ವ್ಯಾಯಾಮ ಮಾಡುತ್ತಾರೆ. ದಿನಕ್ಕೆ ಸುಮಾರು 30 ನಿಮಿಷ ಈಗಲೂ ಸೈಕಲ್ ಸವಾರಿ ಮಾಡುವ ಹವ್ಯಾಸ ಹೊಂದಿದ್ದಾರೆ.

ತ್ಸೆಂಗಾ 80 ವಯಸ್ಸಿನಲ್ಲಿ ಶಿರ್ಸಾಸನ ಮಾಡುತ್ತಿದ್ದರು. 90ರ ವಯಸ್ಸಿನಲ್ಲಿ ಏರೋಬಿಕ್ಸ್ ತರಗತಿಗಳಿಗೆ ಹೋಗಿದ್ದಾರೆ. ದಿನ ನಿತ್ಯ ವ್ಯಾಯಾಮದಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂಬುದು ಇವರ ಮಾತು. ದಿನಕ್ಕೆ 30 ನಿಮಿಷ ಯೋಗ ಮಾಡುವ ತ್ಸೆಂಗಾ ತಮಗಿಷ್ಟದ ಆಹಾರವನ್ನು ಮಿತ ಪ್ರಮಾಣದಲ್ಲಿ ಸೇವಿಸುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...