alex Certify
ಕನ್ನಡ ದುನಿಯಾ       Mobile App
       

Kannada Duniya

ಎರಡು ಪೆಗ್ ಹಾಕಿದ್ಮೇಲೆ ಜನ ಹೇಗ್ಹೇಗೋ ಆಡೋದು ಯಾಕೆ ಗೊತ್ತಾ?

ಕುಡಿದು ಟೈಟಾದವರು ವಿಚಿತ್ರವಾಗಿ ವರ್ತಿಸ್ತಾರೆ. ಕೆಲವರಿಗಂತೂ ಒಂದೆರಡು ಪೆಗ್ ಹಾಕ್ತಿದ್ದಂತೆ ಸಿಕ್ಕಾಪಟ್ಟೆ ಕೋಪ, ರೋಶಾವೇಷ ಶುರುವಾಗಿಬಿಡುತ್ತದೆ. ಇದಕ್ಕೆ ಕಾರಣ ಏನು ಅನ್ನೋದನ್ನು ಪತ್ತೆ ಮಾಡಿದ್ದಾರೆ ಸಂಶೋಧಕರು. ಮದ್ಯ ಸೇವನೆ ಬಳಿಕ ಕೋಪ ಮತ್ತು ಆಕ್ರಮಣಶೀಲತೆಯನ್ನು ಕಡಿಮೆ ಮಾಡುವ ಮೆದುಳಿನ ಕೆಲಭಾಗ ಬಂದ್ ಆಗಿಬಿಡುತ್ತದೆ.

ಹಾಗಾಗಿ ಕೇವಲ ಎರಡೇ ಪೆಗ್ ಹಾಕಿದ್ರೂ ಜನ ಎಗರಾಡಲು ಶುರು ಮಾಡ್ತಾರೆ. ಎಣ್ಣೆ ಏಟು ಅವರ ಸಿಟ್ಟನ್ನು ದುಪ್ಪಟ್ಟು ಮಾಡುತ್ತದೆ. ಸಾಮಾನ್ಯವಾಗಿ ಕುಡಿದ ಮೇಲೆ ಏನು ಮಾತನಾಡ್ತಾರೆ ಅನ್ನೋದು ಕೆಲವರ ಅರಿವಿಗೇ ಬರುವುದಿಲ್ಲ. ಇನ್ನೊಂದಷ್ಟು ಮಂದಿ ತಮ್ಮ ಪಾಡಿಗೆ ತಾವು ಮಾತನಾಡಿಕೊಳ್ತಾರೆ.

ಸಿಕ್ಕಸಿಕ್ಕವರ ಮೇಲೆಲ್ಲಾ ಹರಿಹಾಯುವವರ ಸಂಖ್ಯೆಯೂ ಕಡಿಮೆ ಏನಿಲ್ಲ. ವೋಡ್ಕಾ ಅಥವಾ ಇತರ ಯಾವುದೇ ಅಲ್ಕೋಹಾಲ್ ಇರುವ ಡ್ರಿಂಕ್ಸ್ ಸೇವನೆ ನೇರವಾಗಿ ನಿಮ್ಮ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಕೋಪ ನಿಯಂತ್ರಿಸುವ, ನೆನಪಿನ ಶಕ್ತಿ ಹೊಂದಿರುವ ಮೆದುಳಿನ ಭಾಗವೇ ಆಗ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ.

 

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...