alex Certify
ಕನ್ನಡ ದುನಿಯಾ       Mobile App
       

Kannada Duniya

ಮಿಲಿಟರಿ ತರಬೇತಿ ವೇಳೆ ನಡೆದಿದೆ ಅವಘಡ

ರಷ್ಯಾದಲ್ಲಿ ತರಬೇತಿ ವೇಳೆ ಮಿಲಿಟರಿ ಹೆಲಿಕಾಪ್ಟರ್, ನಿಂತಿದ್ದ ವಾಹನಗಳ ಮೇಲೆ ರಾಕೆಟ್ ದಾಳಿ ನಡೆಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹರಿದಾಡ್ತಿದೆ. ಹೆಲಿಕಾಪ್ಟರ್ ನಡೆಸಿದ ರಾಕೆಟ್ ದಾಳಿಯಿಂದ ಮೂರು ವಾಹನಗಳು ಧ್ವಂಸವಾಗಿವೆ.

ಟ್ರಕ್ ಬಳಿಯೇ ನಿಂತಿದ್ದ ವ್ಯಕ್ತಿಯೊಬ್ಬ ಧೂಳಿನ ನಡುವೆಯೇ ಮೇಲಕ್ಕೆ ಹಾರಿ ಬಿದ್ದಿದ್ದಾನೆ. ಈ ದೃಶ್ಯವನ್ನು ಚಿತ್ರೀಕರಿಸುತ್ತಿದ್ದ ವ್ಯಕ್ತಿಗೂ ಗಾಯಗಳಾಗಿವೆ ಅಂತಾ ಹೇಳಲಾಗ್ತಿದೆ. ಈ ಪ್ರದೇಶದಲ್ಲಿ ರಷ್ಯಾ ಆಗಾಗ ವಾರ್ ಗೇಮ್ಸ್ ತರಬೇತಿ ಹಮ್ಮಿಕೊಳ್ಳುತ್ತಿದೆ.

ಸೋಮವಾರವಷ್ಟೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡ ಇಲ್ಲಿ ಪರಿಶೀಲನೆ ನಡೆಸಿದ್ದರು. ಸೆಪ್ಟೆಂಬರ್ 18ರಂದು ಮಿಲಿಟರಿ ತರಬೇತಿ ವೇಳೆ ಈ ಅಚಾತುರ್ಯ ನಡೆದಿದೆ. ಈ ದಾಳಿಯಲ್ಲಿ ಮಿಲಿಟರಿ ಟ್ರಕ್ ಗೂ ಹಾನಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...