alex Certify
ಕನ್ನಡ ದುನಿಯಾ       Mobile App
       

Kannada Duniya

ಎತ್ತರವಿರುವವರಿಗೆ ಹೆಚ್ಚು ಕಾಡುತ್ತೆ ಈ ಸಮಸ್ಯೆ…!

ಉದ್ದನೆಯ ವ್ಯಕ್ತಿಗಳಿಗೆ ವೆರಿಕೋಸ್ ವೇಯ್ನ್ಸ್ ಅಪಾಯ ಹೆಚ್ಚಿರುತ್ತದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಚರ್ಮದ ಮೇಲ್ಮೈಯ ಅಡಿಯಲ್ಲಿ, ಸಾಮಾನ್ಯವಾಗಿ ಕಾಲುಗಳಲ್ಲಿ ನರಗಳು ಉಬ್ಬಿಕೊಳ್ಳುವ ಹಾಗೂ ತಿರುಚುವ ಸಮಸ್ಯೆ ಇದಾಗಿದೆ.

ಎತ್ತರ ಹೆಚ್ಚಳ ಹಾಗೂ ಎತ್ತರವನ್ನು ನಿರ್ಧರಿಸುವ ಜೀನ್‌ಗಳು ಕೂಡಾ ಈ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಕ್ಯಾಲಿಫೋರ್ನಿಯಾದ ಸ್ಟಾನ್‌ಫರ್ಡ್ ಯುನಿವರ್ಸಿಟಿಯ ಸಂಶೋಧಕರು ಹೇಳಿದ್ದಾರೆ.

ವೆರಿಕೋಸ್ ವೇಯ್ನ್ಸ್ ಸಮಸ್ಯೆಗೆ ಸಂಬಂಧಿತ 30 ಜೀನ್‌ಗಳನ್ನು ಗುರುತಿಸಲಾಗಿದೆ. ಈ ಸಮಸ್ಯೆಗೆ ಚಿಕಿತ್ಸೆ ನೀಡುವಾಗ ಇದರ ಮೂಲ ಕಾರಣದ ಪತ್ತೆಯು ನೆರವು ನೀಡಬಹುದು ಎಂದು ಸ್ಟಾನ್‌ಫರ್ಡ್‌ನ ಪ್ರೊಫೆಸರ್ ನಿಕೋಲಸ್ ಲೀಪರ್ ಹೇಳಿದ್ದಾರೆ.

ನರ ಉಬ್ಬುವ ಈ ಸಮಸ್ಯೆಯನ್ನು ತಡೆಯುವ ಅಥವಾ ಒಮ್ಮೆ ಕಾಣಿಸಿಕೊಂಡರೆ ಅದನ್ನು ರಿವರ್ಸ್ ಮಾಡುವಂತಹ ವೈದ್ಯಕೀಯ ಥೆರಪಿಗಳಿಲ್ಲ. ಲೇಸರ್ ಚಿಕಿತ್ಸೆ ಅಥವಾ ವೈನ್ ಸ್ಟ್ರಿಪ್ಪಿಂಗ್‌ನಂತಹ ಶಸ್ತ್ರಚಿಕಿತ್ಸೆಯೊಂದೇ ಪರಿಹಾರವಾಗಿದೆ ಎಂದು ಇನ್ನೊಬ್ಬ ಪ್ರೊಫೆಸರ್ ಅಲಿಸ್ಸಾ ಫ್ಲೋರ್ಸ್ ಹೇಳಿದ್ದಾರೆ.

ಈ ಅಧ್ಯಯನದಲ್ಲಿ 4,13,519 ಮಂದಿಯಲ್ಲಿ ವೆರಿಕೋಸ್ ವೇಯ್ನ್ಸ್ ಗೆ ಕಾರಣವಾಗುವ ಅಂಶವನ್ನು ವಿಶ್ಲೇಷಿಸಲಾಗಿದೆ. ಅವರ ಪೈಕಿ 8,577 ಮಂದಿಗೆ ವೆರಿಕೋಸ್ ವೇಯ್ನ್ಸ್ ಸಮಸ್ಯೆಯಿತ್ತು ಎನ್ನಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...