alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ ಮನವನ್ನು ಮುದಗೊಳಿಸುತ್ತೆ ಈ ವಿಡಿಯೋ

ಅದು ಬ್ರಿಟನ್ ನ ಹೀಥ್ರೂ ವಿಮಾನ ನಿಲ್ದಾಣ. ಸದಾ ಸಾಕಷ್ಟು ಪ್ರಯಾಣಿಕರಿಂದ ತುಂಬಿ ತುಳುಕುವ ವಿಮಾನ ನಿಲ್ದಾಣದಲ್ಲಿ ಸೆಪ್ಟೆಂಬರ್ 7ನೇ ತಾರೀಕಿನಂದು ಪ್ರಯಾಣಿಕರಿಗೆ ಅಚ್ಚರಿ ಕಾದಿತ್ತು. ಹಳದಿ ಬಣ್ಣದ ಜಾಕೆಟ್, ಬಿಳಿ ಬಣ್ಣದ ಪ್ಯಾಂಟ್ ಹಳದಿ ಬಣ್ಣದ ಸೂಟ್ ಕೇಸ್ ಹಿಡಿದು ಬಂದ ಒಂದಷ್ಟು ಮಂದಿ ಇದ್ದಕ್ಕಿದ್ದ ಹಾಗೆ ಕುಣಿಯೋದಕ್ಕೆ ಶುರುಮಾಡಿದ್ರು.

ಅಲ್ಲಿ ಏನಾಗ್ತಿದೆ ಅನ್ನೋ ಕನ್ಫ್ಯೂಷನ್ ಎಲ್ಲರಲ್ಲೂ ಇತ್ತು. ಆದ್ರೆ ಫ್ಲಾಷ್ ಮಾಬ್ ಮೂಲಕ ಅವರು ನೆರೆದಿದ್ದ ಪ್ರಯಾಣಿಕರನ್ನು ರಂಜಿಸೋದಕ್ಕೆ ನಿಂತರು. ಹೀಗೆ ಹಲವು ಹಾಡುಗಳಿಗೆ ನೃತ್ಯ ಮಾಡಿ ಅವರು ಜನರನ್ನ ಖುಷಿ ಪಡಿಸಿದ್ರು. ಅಂದಹಾಗೆ ಅವರು ಸುಮ್ಮಸುಮ್ಮನೆ ನೃತ್ಯ ಮಾಡಲಿಲ್ಲ. ಬ್ರಿಟನ್ ನ ಖ್ಯಾತ ರಾಕ್ ಸ್ಟಾರ್ ಫ್ರೆಡ್ಡಿ ಮರ್ಕ್ಯುರಿ ಅವರ 72ನೇ ಹುಟ್ಟುಹಬ್ಬದ ಪ್ರಯುಕ್ತ ಡ್ಯಾನ್ಸ್ ಪರ್ಫಾಮೆನ್ಸ್ ನೀಡಿದ್ರು.

ಬ್ರಿಟನ್ ನ ಹೀಥ್ರೂ ವಿಮಾನ ನಿಲ್ದಾಣಕ್ಕೂ ರಾಕ್ ಸ್ಟಾರ್ ಫ್ರೆಡ್ಡಿಗೂ ಅವಿನಾಭಾವ ಸಂಬಂಧವಿದೆ. 50 ವರ್ಷಗಳ ಹಿಂದೆ ಇದೇ ವಿಮಾನ ನಿಲ್ದಾಣದಲ್ಲಿ ಫ್ರೆಡ್ಡಿ ಬ್ಯಾಗೇಜ್ ಕೌಂಟರ್ ನಲ್ಲಿ ಕೆಲಸ ಮಾಡುತ್ತಿದ್ದರು. ಆನಂತರದಲ್ಲಿ ಆಕೆ ಬ್ರಿಟನ್ ನ ಪ್ರಮುಖ ರಾಕ್ ಸ್ಟಾರ್ ಆಗಿ ಗುರುತಿಸಿಕೊಂಡರು.

1991ರಲ್ಲಿ ನಿಧನರಾದ ಫ್ರೆಡ್ಡಿಯನ್ನ ವಿಮಾನ ನಿಲ್ದಾಣದ ಸಿಬ್ಬಂದಿ ಈ ಮೂಲಕ ಮತ್ತೆ ನೆನಪು ಮಾಡಿಕೊಂಡಿದ್ದಾರೆ. ಫ್ರೆಡ್ಡಿ ಫಾರ್ ಎ ಡೇ ಹೆಸರಿನಲ್ಲಿ ರಾಕ್ ಸ್ಟಾರ್ ಹುಟ್ಟುಹಬ್ಬವನ್ನ ಆಚರಿಸುವುದರ ಜೊತೆಗೆ ಏಡ್ಸ್ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ವಿಮಾನ ನಿಲ್ದಾಣ ಸಿಬ್ಬಂದಿ ಮಾಡಿದ್ದಾರೆ.

Freddie For Take-Off

Today, members of our baggage team along with British Airways colleagues performed a tribute at T5 Arrivals to one-time Heathrow baggage handler Freddie Mercury, in support of The Mercury Phoenix Trust! #BohemianRhapsody

Posted by Heathrow Airport on Wednesday, September 5, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...