alex Certify
ಕನ್ನಡ ದುನಿಯಾ       Mobile App
       

Kannada Duniya

ಮನಕಲಕುವಂತಿದೆ ಮನೆಕೆಲಸದಾಕೆಯ ಈ ದೃಶ್ಯ

jakarta

ಜಕಾರ್ತ: ಕೆಲವರು ಹೃದಯ ಶ್ರೀಮಂತಿಕೆ ಹೊಂದಿರುತ್ತಾರೆ. ಇನ್ನೊಬ್ಬರ ಕಷ್ಟ, ಸುಖಗಳಲ್ಲಿ ಪಾಲ್ಗೊಳ್ಳುವ ಮೂಲಕ ಮಾನವೀಯತೆ ತೋರುತ್ತಾರೆ. ಆದರೆ, ಕೆಲವರು ಅದಕ್ಕೆ ವಿರುದ್ಧವಾಗಿರುತ್ತಾರೆ.

ಅಂತಹವರ  ಕುರಿತ ಸ್ಟೋರಿಯೊಂದು ಇಲ್ಲಿದೆ ನೋಡಿ. ಮನೆಯಲ್ಲಿ ಕೆಲಸ ಮಾಡುವವಳನ್ನು ರೆಸ್ಟೋರೆಂಟ್ ಗೆ ಕರೆದುಕೊಂಡು ಹೋಗಿದ್ದ  ಕುಟುಂಬವೊಂದು ಆಕೆಯನ್ನು ಪಕ್ಕದ ಟೇಬಲ್ ನಲ್ಲಿ ಕೂರಿಸಿದೆ. ರೆಸ್ಟೋರೆಂಟ್ ನಲ್ಲಿ ಕುಟುಂಬದವರು ಸಂಭ್ರಮದಿಂದ ಕಾಲ ಕಳೆದಿದ್ದಾರೆ. ಕೆಲಸದಾಕೆ ದೂರದಿಂದಲೇ ಕುಳಿತು, ಮಾಲೀಕರ ಕುಟುಂಬದವರ ಸಂಭ್ರಮವನ್ನು ಕಣ್ತುಂಬಿಕೊಂಡಿದ್ದಾಳೆ. ಈಕೆಯ ಅಸಹಾಯಕತೆ ಎಂತಹವರ ಮನವನ್ನು ಕಲಕುವಂತಿದೆ.

ಕೆಲಸದಾಕೆಯನ್ನು ಬೇರೆ ಟೇಬಲ್ ನಲ್ಲಿ ಕೂರಿಸಿ ಮಾಲೀಕನ ಕುಟುಂಬ ಸಂಭ್ರಮಿಸುವ ಈ ದೃಶ್ಯವನ್ನು ಸೆರೆ ಹಿಡಿದ ಇಂಡೋನೇಷ್ಯಾದ ಮೈಕೆಲ್ ಫ್ಯಾನಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಸದಾ ತಮ್ಮ ಮನೆಯಲ್ಲಿ ಸೇವೆಯನ್ನು ಮಾಡುವ, ನಮ್ಮ ಜೀವನದ ಭಾಗವಾಗಿರುವ ಮನೆ ಕೆಲಸದವರನ್ನು ದೂರವಿಡುವ ಬದಲು ಮಾನವೀಯತೆಯಿಂದ ಕಾಣಬೇಕಿದೆ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಮೈಕೆಲ್ ಫ್ಯಾನಿ ಮಾಡಿರುವ ಈ ಪೋಸ್ಟ್ 60 ಸಾವಿರಕ್ಕೂ ಅಧಿಕ ಬಾರಿ ಶೇರ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...