alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ರಿಟನ್ ಮಂದಿ ತೆರಿಗೆ ಕಟ್ಟದೇ ಇರಲು ಇದಂತೆ ಕಾರಣ…

britan

ಬ್ರಿಟನ್ ನಲ್ಲಿ ಎಷ್ಟೋ ಮಂದಿ ಗಡುವು ಮುಗಿದ್ರೂ ಆದಾಯ ತೆರಿಗೆ ಕಟ್ತಾ ಇಲ್ಲ. ಇದಕ್ಕೆ ಅವರು ಕೊಡುವ ಕಾರಣ ಮಾತ್ರ ಸಿಲ್ಲಿಯಾಗಿದೆ. ಟ್ಯಾಕ್ಸ್ ಫಾರ್ಮ್ ನನ್ನ ದೋಣಿಯಲ್ಲಿತ್ತು, ದೋಣಿಗೆ ಬೆಂಕಿಬಿದ್ದು ಅದು ಕೂಡ ಸುಟ್ಟುಹೋಗಿದೆ ಅಂತಾ ಒಬ್ರು ಹೇಳಿದ್ದಾರಂತೆ. ಇನ್ನು ಕೆಲವರು ಅರ್ಜಿಯಲ್ಲಿ ಮಕ್ಕಳು, ಹೆತ್ತವರು ಅಥವಾ ಸಹೋದ್ಯೋಗಿಗಳು ಹರಿದು ಹಾಕಿದ್ದಾರೆ, ಹಾಳು ಮಾಡಿದ್ದಾರೆ ಅಂತೆಲ್ಲಾ ನೆಪ ಹೇಳ್ತಿದ್ದಾರೆ.

ಬ್ರಿಟನ್ ಕಾನೂನಿನಂತೆ ಜನವರಿ 31ರೊಳಗೆ ಎಲ್ರೂ ಆದಾಯ ತೆರಿಗೆ ಕಟ್ಟಬೇಕು, ಇಲ್ಲದಿದ್ರೆ ದಂಡ ವಿಧಿಸಲಾಗುತ್ತದೆ. ಆದ್ರೂ ಜನ ನಿಗದಿತ ಸಮಯದಲ್ಲಿ ಟ್ಯಾಕ್ಸ್ ಕಟ್ಟಲು ಮನಸ್ಸು ಮಾಡ್ತಾ ಇಲ್ಲ. ಬಹುತೇಕ ಮಂದಿ ಟ್ಯಾಕ್ಸ್ ರಿಟರ್ನ್ ಫಾರ್ಮ್ ನಮ್ಮ ಕೈಗೆ ತಲುಪಿಯೇ ಇಲ್ಲ ಅಂತಾ ಪೋಸ್ಟ್ ಮ್ಯಾನ್ ಮೇಲೆ ತಪ್ಪು ಹೊರಿಸಿದ್ದಾರೆ.

ಇನ್ನೊಬ್ಬ ಮಹಾನುಭಾವ ಹೆಂಡ್ತಿಯ ತಲೆನೋವೇ ಟ್ಯಾಕ್ಸ್ ಕಟ್ಟದೇ ಇರಲು ಕಾರಣ ಎಂದಿದ್ದಾನೆ. ಪ್ರತಿವರ್ಷ ತೆರಿಗೆ ಪಾವತಿಸಲು ಪತ್ನಿ ನನಗೆ ಸಹಾಯ ಮಾಡ್ತಾ ಇದ್ಲು, ಆಕೆಗೆ 10 ದಿನಗಳಿಂದ ತಲೆನೋವು, ಏನ್ಮಾಡ್ಲಿ ಸ್ವಾಮಿ ಅಂತಾ ಅಸಹಾಯಕತೆ ವ್ಯಕ್ತಪಡಿಸಿದ್ದಾನೆ. ಇವರ ಕಾರಣಗಳನ್ನು ಕೇಳಿ ಆದಾಯ ತೆರಿಗೆ ಅಧಿಕಾರಿಗಳಿಗೆ ನಗಬೇಕೋ ಅಳಬೇಕೋ ತೋಚದಂತಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...