alex Certify
ಕನ್ನಡ ದುನಿಯಾ       Mobile App
       

Kannada Duniya

ಅದೃಷ್ಟ ಅಂದ್ರೆ ಇದೆ ಅಲ್ವಾ? ಜ್ಯೂಸ್ ರೂಪದಲ್ಲಿ ಬಂತು ಕೋಟ್ಯಾಂತರ ರೂಪಾಯಿ…!

ಅದೃಷ್ಟ ಎಂಬುದು ಯಾರಿಗೆ ಯಾವ ರೂಪದಲ್ಲಿ ಬರುತ್ತದೋ ಹೇಳಲಾಗುವುದಿಲ್ಲ. ಇದಕ್ಕೆ ತಾಜಾ ಉದಾಹರಣೆ ಈ ವ್ಯಕ್ತಿ. ಈತನಿಗೆ ಬರೋಬ್ಬರಿ 315 ಮಿಲಿಯನ್ ಡಾಲರ್ ಬಹುಮಾನ ಸಿಕ್ಕಿದ್ದು, ಅದಕ್ಕೆ ಕಾರಣವಾಗಿದ್ದು ಮಾತ್ರ 5 ಡಾಲರ್ ಬೆಲೆಯ ಆರೆಂಜ್ ಜ್ಯೂಸ್ ಎಂದರೆ ನೀವು ನಂಬಲೇಬೇಕು.

ಹೌದು….ಇಂಥದೊಂದು ಘಟನೆ ಅಮೆರಿಕದಲ್ಲಿ ನಡೆದಿದೆ. ಆಫ್ರಿಕಾದಿಂದ ವಲಸೆ ಬಂದು ನ್ಯೂಜೆರ್ಸಿಯಲ್ಲಿ ನೆಲೆಸಿರುವ ತಯ್ಯೇಬ್ ಸೌಉಮಿ ಎಂಬಾತ ಮೇ 19 ರಂದು ಸ್ಟೋರ್ ಒಂದರಲ್ಲಿ ಐದು ಡಾಲರ್ ಬೆಲೆಯ ಆರೆಂಜ್ ಜ್ಯೂಸ್ ಟಿನ್ ಖರೀದಿಸಿ ಮನೆಗೆ ತಂದಿದ್ದ.

ಆದರೆ ಇದೇ ಆರೆಂಜ್ ಜ್ಯೂಸ್ ಟಿನ್ 2.5 ಡಾಲರ್ ಗೆ ಸಿಗುತ್ತದೆ ಎಂದು ತಕರಾರು ತೆಗೆದ ಆತನ ಪತ್ನಿ, ಅದನ್ನು ವಾಪಸ್ ಮಾಡುವಂತೆ ತಿಳಿಸಿದಳು. ಹೀಗಾಗಿ ವಿಧಿ ಇಲ್ಲದೆ ತಯ್ಯೇಬ್ ಮತ್ತೆ ಸ್ಟೋರ್ ಗೆ ತೆರಳಿದ್ದು, ಆರೆಂಜ್ ಜ್ಯೂಸ್ ಟಿನ್ ವಾಪಸ್ ಮಾಡಿ ಹಣ ಪಡೆದಾಗ ಅಲ್ಲಿದ್ದ ಲಾಟರಿ ಟಿಕೆಟ್ ಆತನ ಕಣ್ಣಿಗೆ ಬಿದ್ದಿದೆ. ಸರಿ, ಆರೆಂಜ್ ಜ್ಯೂಸ್ ವಾಪಸ್ ಮಾಡಿದ್ದರಿಂದ ಬಂದ ಹಣದಲ್ಲಿ ಟಿಕೆಟ್ ಖರೀದಿಸಿದ್ದಾನೆ.

ಟಿಕೆಟ್ ಖರೀದಿಸಿದ್ದ ಸಂಗತಿಯನ್ನೇ ತಯ್ಯೇಬ್ ಮರೆತಿದ್ದು, ಕೆಲ ದಿನಗಳ ಹಿಂದೆ ತನ್ನ ಕಾರ್ ಸರ್ವಿಸ್ ಗೆ ಬಿಡಲು ಹೋದಾಗ ಟಿಕೆಟ್ ಪರಿಶೀಲಿಸಿ ಹೌಹಾರಿದ್ದಾನೆ. ಈತ ಖರೀದಿಸಿದ್ದ ಟಿಕೆಟ್ ಗೆ ಬರೋಬ್ಬರಿ 315 ಮಿಲಿಯನ್ ಡಾಲರ್ ಬಹುಮಾನ ಬಂದಿದೆ. ಇದೀಗ ಆ ಹಣದಲ್ಲಿ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ತಯ್ಯೇಬ್ ಕುಟುಂಬ ಮುಂದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...