alex Certify
ಕನ್ನಡ ದುನಿಯಾ       Mobile App
       

Kannada Duniya

ಕಣ್ಣಲ್ಲಿ ನೀರು ತರಿಸುತ್ತೆ ಪ್ರತಿ ದಿನ ಒಂದೇ ಸಿಗ್ನಲ್ ನಲ್ಲಿ ನಿಲ್ಲುವ ಈ ವೃದ್ಧನ ಕಥೆ

ಸಿಗ್ನಲ್ ಬಳಿ ಭಿಕ್ಷುಕರು ಮಾಮೂಲಿ. ಕಾರು, ಬೈಕ್ ಬಳಿ ಬಂದು ಕೈ ಒಡ್ಡಿದಾಗ ಕೆಲವರು ಹಣ ನೀಡಿದ್ರೆ ಮತ್ತೆ ಕೆಲವರು ಕೈ ತಿರುಗಿಸಿ ಹೋಗ್ತಾರೆ. ಸಾವಿರದಲ್ಲಿ ಒಬ್ಬರು ಅವರನ್ನು ಬಳಿಗೆ ಕರೆದು ಕಷ್ಟ ವಿಚಾರಿಸ್ತಾರೆ. ಸಾಮಾನ್ಯವಾಗಿ ಸಿಗ್ನಲ್ ಬಳಿ ನಿಲ್ಲುವ ಭಿಕ್ಷುಕರೆಲ್ಲ ನಂಬಿಕಸ್ತರಲ್ಲ ಎಂಬ ಭಾವನೆ ಅನೇಕರಲ್ಲಿದೆ. ಹಾಗಾಗಿಯೇ ಅವ್ರ ಸಹವಾಸ ಬೇಡ ಎನ್ನುವವರಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಗ್ನಲ್ ಬಳಿ ನಿಲ್ಲುವ ವೃದ್ಧರೊಬ್ಬರ ಸುದ್ದಿ ಚರ್ಚೆಯಲ್ಲಿದೆ. ಕರಾಚಿ ವಲಾಯ್ ಹೆಸರಿನ ಫೇಸ್ಬುಕ್ ಪೇಜ್ ನಲ್ಲಿ ವ್ಯಕ್ತಿಯೊಬ್ಬರು ಸಿಗ್ನಲ್ ನಲ್ಲಿ ನಿಲ್ಲುವ ವ್ಯಕ್ತಿಯೊಬ್ಬರ ಕಥೆಯನ್ನು ಹಂಚಿಕೊಂಡಿದ್ದಾರೆ. ಪ್ರತಿ ದಿನ ಸಂಜೆ 8 ಗಂಟೆಗೆ ಸಿಂಧಿ ಮುಸ್ಲಿಂ ಟ್ರಾಫಿಕ್ ಸಿಗ್ನಲ್ ನಲ್ಲಿ ಕಾಣಿಸಿಕೊಳ್ತಾರಂತೆ ಈ ವೃದ್ಧ.

ಕೈನಲ್ಲಿ ಕ್ಲೀನಿಂಗ್ ಬಟ್ಟೆ ಹಿಡಿದು ನಿಲ್ಲುವ ವೃದ್ಧರು ಕಾರುಗಳ ಗ್ಲಾಸ್ ಗಳನ್ನು ಒರೆಸುತ್ತಾರಂತೆ. ಬೇಡವೆಂದ್ರೆ ಒತ್ತಾಯ ಮಾಡದೆ, ಹಣಕ್ಕಾಗಿ ಭಿಕ್ಷೆ ಬೇಡದೆ ಶ್ರದ್ಧೆಯಿಂದ ಕೆಲಸ ಮಾಡ್ತಾರಂತೆ. ಪ್ರತಿದಿನ ಅವರನ್ನು ಅದೇ ಜಾಗದಲ್ಲಿ ನೋಡಿದ ವ್ಯಕ್ತಿಯೊಬ್ಬರು ಅವ್ರ ಬಗ್ಗೆ ವಿಚಾರಿಸಿದ್ದಾರೆ.

8 ತಿಂಗಳ ಹಿಂದೆ ಈ ವ್ಯಕ್ತಿಯ ಮಗ ಸಾವನ್ನಪ್ಪಿದ್ದಾನಂತೆ. ಇವರಿಗೆ 6 ಹೆಣ್ಣು ಮಕ್ಕಳಂತೆ. ಅವರ ಹೊಟ್ಟೆ ತುಂಬಿಸಲು ಈ ಕೆಲಸ ಮಾಡ್ತಾರಂತೆ ವೃದ್ಧರು. ಫೇಸ್ಬುಕ್ ನಲ್ಲಿ ಈ ಸಂಗತಿ ಪೋಸ್ಟ್ ಆಗ್ತಿದ್ದಂತೆ ಅನೇಕರು ರೀಪೋಸ್ಟ್ ಮಾಡಿದ್ದಾರೆ. ಆರ್ಥಿಕ ಸಹಾಯ ನೀಡಲು ಮುಂದೆ ಬಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...