alex Certify
ಕನ್ನಡ ದುನಿಯಾ       Mobile App
       

Kannada Duniya

ವ್ಯಕ್ತಿಯ ಜೀವ ಉಳಿಸಿದೆ 50 ವರ್ಷದ ಹಿಂದಿನ ಸ್ನೇಹ

50 ವರ್ಷದ ಹಿಂದಿನ ಸ್ನೇಹವೊಂದು ವ್ಯಕ್ತಿಯೊಬ್ಬನ ಜೀವ ಉಳಿಸಿದೆ. ಕ್ಲಾಸ್ ಮೇಟ್ ಆಗಿದ್ದವನಿಗೆ ಹಿಂದೆಮುಂದೆ ಯೋಚಿಸದೇ ಸ್ನೇಹಿತನೊಬ್ಬ ಕಿಡ್ನಿ ನೀಡಿದ ಘಟನೆ ಅಮೆರಿಕದಲ್ಲಿ ನಡೆದಿದೆ.

ವಾಷಿಂಗ್ ಟನ್ ಡಿಸಿಯಲ್ಲಿ ಚಾರ್ಲಿ ಬಾಲ್ ಹಾಗೂ ಕೆನೆಥ್ ವಾಕರ್ ಇಬ್ಬರೂ 50 ವರ್ಷದ ಹಿಂದೆ ಒಟ್ಟಿಗೆ ಸ್ಕೂಲ್ ಗೆ ಹೋದವರು. ಇದಾದ ಬಳಿಕ ಅವರಿಬ್ಬರೂ ಬೇರೆ ಬೇರೆಯಾಗಿದ್ದು, ಬೇರೆ ಊರುಗಳಲ್ಲಿ ವಾಸವಿದ್ದರು. ಇತ್ತೀಚೆಗೆ ತನಗೆ ತುರ್ತಾಗಿ ಕಿಡ್ನಿಯೊಂದು ಬೇಕಾಗಿದೆ ಎಂಬ ಬಗ್ಗೆ ವಾಕರ್, ಚಾರ್ಲಿಗೆ ಒಂದು ಇ ಮೇಲ್ ಕಳುಹಿಸಿದ್ದ.

ವಾಕರ್ ತನ್ನ ಗೆಳೆಯನಾಗಿದ್ದ ಎಂಬುದನ್ನು ನೆನೆಸಿಕೊಂಡ ಚಾರ್ಲಿ, ಕಿಡ್ನಿ ಮ್ಯಾಚ್ ಆದರೆ ಖಂಡಿತಾ ಕೊಡುತ್ತೇನೆಂಬ ಬಗ್ಗೆ ಪ್ರತಿಕ್ರಿಯಿಸಿದ್ದ. ಕೊನೆಗೂ ಚಾರ್ಲಿ, ವಾಕರ್ ಗೆ ಕಿಡ್ನಿ ನೀಡಿ ಗೆಳೆಯನನ್ನು ಬದುಕಿಸಿಕೊಂಡಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...