alex Certify
ಕನ್ನಡ ದುನಿಯಾ       Mobile App
       

Kannada Duniya

ಜ್ವಾಲಾಮುಖಿ ಸ್ಪೋಟ: ಮುಗಿಲೆತ್ತರಕ್ಕೆ ಚಿಮ್ಮಿದ ಲಾವಾರಸ

ಹೊನೊಲೊಲು: ಅಮೆರಿಕದ ಹವಾಯ್ ದ್ವೀಪದ ಸಮೂಹದಲ್ಲಿ ಜ್ವಾಲಾಮುಖಿ ಸ್ಪೋಟಗೊಂಡಿದೆ. ಹೊನೊಲೊಲು ಸಮೀಪದ ಪಹೋ ನಗರಕ್ಕೆ ಸಮೀಪದ ಲೀಲಾನಿ ಎಸ್ಟೇಟ್ ನಲ್ಲಿ ಭೂಮಿಯಿಂದ ಕುದಿಯುತ್ತಿರುವ ಲಾವಾರಸ ಹೊರ ಬರುತ್ತಿದ್ದು, ಸುತ್ತಮುತ್ತಲ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ.

ಬೃಹತ್ ಗಾತ್ರದ ಲಾವಾ ಚಿಲುಮೆಗಳು ಇಡೀ ಪ್ರದೇಶವನ್ನು ಆವರಿಸಿಕೊಂಡಿವೆ. ಮುಗಿಲೆತ್ತರಕ್ಕೆ ಚಿಮ್ಮಿದ ಲಾವಾರಸ ಬಾನಂಗಳದಲ್ಲಿ ಚಿತ್ತಾರದ ರೀತಿಯಲ್ಲಿ ಕಂಡು ಬಂದಿದೆ. ಜನರಿಗೆ ಇದು ಆತಂಕ ಮೂಡಿಸಿದ್ದರೆ, ವಿಜ್ಞಾನಿಗಳು ಅಧ್ಯಯನದಲ್ಲಿ ನಿರತರಾಗಿದ್ದಾರೆ. ರಕ್ಷಣಾ ತಂಡಗಳು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿವೆ.

ಜ್ವಾಲಾಮುಖಿಗಳಿಂದ ಕುದಿಯುವ ಕೆಂಪಾದ ಲಾವಾರಸ ಹರಿದು ಬರುತ್ತಿದ್ದು, ದಟ್ಟ ಹೊಗೆಯಿಂದ ಇಡೀ ಪ್ರದೇಶದ ವಾತಾವರಣ ಬದಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...