alex Certify
ಕನ್ನಡ ದುನಿಯಾ       Mobile App
       

Kannada Duniya

ಈ ರಸ್ತೆಯಲ್ಲಿ ಹೋಗಲು ಜನರಿಗೆ ನಡುಕ, ಕಾರಣ ಕೇಳಿದ್ರೆ….

the-haunted-road-motorists-are-too-afraid-to-drive-down

ಕಾರ್ಗತ್ತಲು, ಬಿಕೋ ಎನ್ನುತ್ತಿರುವ ರಸ್ತೆ. ಒಂಟಿಯಾಗಿ ಚಲಿಸ್ತಾ ಇರೋ ವಾಹನ. ಇದ್ದಕ್ಕಿದ್ದಂತೆ ಆ ಕಾರಿನ ವಿಂಡ್ ಸ್ಕ್ರೀನ್ ವೈಪರ್ಗಳು ನಿಂತು ಬಿಡುತ್ತವೆ. ಕಾರು ತಂತಾನೇ ಲಾಕ್, ಅನ್ ಲಾಕ್ ಆಗುತ್ತೆ. ರೇಡಿಯೋ ಆಫ್ ಆಗಿಬಿಡುತ್ತೆ. ಕತ್ತಲೆಯನ್ನು ಸೀಳಿಕೊಂಡು ದೆವ್ವಗಳು ಪ್ರತ್ಯಕ್ಷವಾಗುತ್ತವೆ.

ಇದು ಯಾವುದೋ ಸಿನೆಮಾದ ಕಥೆಯಲ್ಲ, ನ್ಯೂ ಸೌತ್ ವೇಲ್ಸ್ ನ ವೇಕರ್ಸ್ಟ್ ಪಾರ್ಕ್ ವೇ ರಸ್ತೆಯಲ್ಲಿ ವಾಹನ ಸವಾರರಿಗೆ ಆಗ್ತಿರೋ ಭಯಾನಕ ಅನುಭವ. ಈ ರೋಡ್ ನಲ್ಲಿ ಲೆಕ್ಕವೇ ಇಲ್ಲದಷ್ಟು ಇಂತಹ ಅಲೌಕಿಕ ಘಟನೆಗಳು ನಡೆದಿವೆ.

haunt

ಬೆಳಗಿನ ಜಾವ 3 ಗಂಟೆ ವೇಳೆಗೆ ಹಚ್ಚಹಸಿರು  ಬಣ್ಣದ ವ್ಯಕ್ತಿಯೊಬ್ಬ ಪದೇ ಪದೇ ಇಲ್ಲಿ ರಸ್ತೆ ದಾಟುತ್ತಾನಂತೆ. ಎರಡು ಹೆಣ್ಣು ದೆವ್ವಗಳನ್ನು ನೋಡಿ ನೂರಾರು ವಾಹನ ಸವಾರರು ಬೆಚ್ಚಿಬಿದ್ದಿದ್ದಾರೆ. ಒಂದು ದೆವ್ವಕ್ಕೆ ವಯಸ್ಸಾಗಿದ್ರೆ, ಇನ್ನೊಂದು ಯಂಗ್ ಆಗಿದೆ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.

50 ವರ್ಷಗಳ ಹಿಂದೆ ಸ್ಕಾಟ್ ಲ್ಯಾಂಡ್ ನ ಇಬ್ಬರು ಕ್ರಿಶ್ಚಿಯನ್ ಸನ್ಯಾಸಿನಿಯರು ಇಲ್ಲಿ ಮೃತಪಟ್ಟಿದ್ದರಂತೆ. ಅವರೇ ದೆವ್ವವಾಗಿ ವಾಹನ ಸವಾರರನ್ನು ಕಾಡಿಸುತ್ತಿದ್ದಾರೆ ಅಂತಾನೂ ಹೇಳಲಾಗ್ತಿದೆ. ಒಮ್ಮೊಮ್ಮೆ ದೆವ್ವಗಳು ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತು ಚಾಲಕರನ್ನು ಹೆದರಿಸುತ್ತವಂತೆ.

ಈ ರಸ್ತೆಯಲ್ಲಿ ಚಿತ್ರವಿಚಿತ್ರ ಘಟನೆಗಳು ನಡೆಯುತ್ತಿದ್ದು, ಇದೆಲ್ಲಾ ದೆವ್ವಗಳ ಕಾಟ ಎಂದೇ ಜನರು ನಂಬಿದ್ದಾರೆ. ಅಷ್ಟೇ ಅಲ್ಲ ಈ ದೆವ್ವಗಳ ಕಾಟದಿಂದ ಹಲವು ಬಾರಿ ಅಪಘಾತಗಳು ಕೂಡ ಸಂಭವಿಸಿವೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...